ವೋಟರ್ ಐಡಿ ಪರಿಷ್ಕರಣೆಯಲ್ಲಿ ಅಕ್ರಮ ಪ್ರಕರಣ: ಸಮನ್ವಯ ಟ್ರಸ್ಟ್ ಗೆ ನೋಟಿಸ್.

Promotion

ಬೆಂಗಳೂರು,ನವೆಂಬರ್,21,2022(www.justkannada.in):  ಬೆಂಗಳೂರಿನಲ್ಲಿ ವೋಟರ್ ಐಡಿ ಪರಿಷ್ಕರಣೆಯಲ್ಲಿ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ  ಪ್ರಾದೇಶಿಕ  ಆಯುಕ್ತರ ಕಚೇರಿಯಿಂದ ವಿಚಾರಣೆಗೆ ಹಾಜರಾಗುವಂತೆ ಸಮನ್ವಯ ಟ್ರಸ್ಟ್ ಗೆ ನೋಟಿಸ್ ನೀಡಲಾಗಿದೆ.

ಬುಧವಾರ ವಿಚಾರಣೆಗೆ ಹಾಜರಾಗುವಂತೆ ಸಮನ್ವಯ ಟ್ರಸ್ಟ್ ಗೆ ಪ್ರಾದೇಶಿಕ  ಆಯುಕ್ತರ ಕಚೇರಿಗೆ ನೋಟಿಸ್ ನೀಡಲಾಗಿದೆ. ಚಿಲುಮೆ ಸಂಸ್ಥೆಗೆ ನೀಡಿದ್ದಅನುಮತಿ ದುರ್ಬಳಕೆ ಆರೋಪ  ಚಿಲುಮೆ ಸಂಸ್ಥೆ ವಿರುದ್ದ ಸಮನ್ವಯ ಟ್ರಸ್ಟ್ ದೂರು ನೀಡಿತ್ತು.

ಈ ಹಿನ್ನೆಲೆಯಲ್ಲಿ ಸಾಕ್ಷ್ಯಾಧಾರ,  ಸಂಗ್ರಹಿಸಿರುವ ದಾಖಲೆ ಸಲ್ಲಿಸುವಂತೆ ಸಮನ್ವಯ ಟ್ರಸ್ಟ್ ಗೆ ಸೂಚನೆ ನೀಡಲಾಗಿದೆ. ರಾಜ್ಯಕ್ಕೆ ಕೇಂದ್ರ ಚುನಾವಣಾ ಆಯೋಗ ಭೇಟಿ ನೀಡುವ ಸಾಧ್ಯತೆ ಇದ್ದು ಈ ಹಿನ್ನೆಲೆಯಲ್ಲಿ ಬಿಬಿಎಂಪಿಯು ಡಿಲಿಟ್ ಆಗಿರುವ ವೋಟರ್ ಐಡಿಗಳ ಪರಿಶೀಲನೆ  ನಡೆಸುತ್ತಿದ್ದು, ಚಿಲುಮೆಗೆ ಅನುಮತಿ ಬಳಿಕ 15 ಸಾವಿರ ವೋಟರ್ ಡಿಲೀಟ್ ಆಗಿದೆ. ಇದರ ಹಿಂದೆ ಚಿಲುಮೆ ಸಂಸ್ಥೆ  ಕೈವಾಡ ಇದೇಯಾ ಎಂಬ  ಬಗ್ಗೆ ಮಾಹಿತಿ ಸಂಗ್ರಹಿಸುತ್ತಿದೆ.

Key words: Illegality case – voter ID-revision- Notice -sahakara trust.