ಬಿ.ಎಸ್ ಯಡಿಯೂರಪ್ಪ ಅವರನ್ನು ನಿರ್ಲಕ್ಷಿಸಿದರೆ ಬಿಜೆಪಿಗೆ ಭಾರಿ ಅನಾಹುತ- ಶ್ರೀ ಮುರುಘಾ ಶರಣರಿಂದ ಎಚ್ಚರಿಕೆ.

Promotion

ಚಿತ್ರದುರ್ಗ.ಜುಲೈ.20.2021(www.justkannada.in) ಸಿ.ಎಂ  ಬಿ.ಎಸ್. ಯಡಿಯೂರಪ್ಪ ಅವರನ್ನು ಹೈಕಮಾಂಡ್ ನಿರ್ಲಕ್ಷಿಸಿದರೆ ರಾಜ್ಯದಲ್ಲಿ ಬಿ.ಜೆ.ಪಿ ಪಕ್ಷವು ಮುಂದೆ ಭಾರಿ ಅನಾಹುತವನ್ನು ಎದುರಿಸಬೇಕಾಗುತ್ತದೆ ಎಂದು ಶ್ರೀ ಮುರುಘಾ ಶರಣರು ಎಚ್ಚರಿಕೆ ನೀಡಿದ್ದಾರೆ.jk

ಚಿತ್ರದುರ್ಗದಲ್ಲಿ ಇಂದು ಸುದ್ಧಿಗೋಷ್ಠಿ  ನಡೆಸಿ ಮಾತನಾಡಿದ ಅವರು,  ಸಿ.ಎಂ  ಬಿ.ಎಸ್. ಯಡಿಯೂರಪ್ಪ ಬಿಜೆಪಿ ಪಕ್ಷವನ್ನು ರಾಜ್ಯದಲ್ಲಿ ಅಧಿಕಾರಕ್ಕೆ ತರಲು ಬಹಳ ಶ್ರಮಪಟ್ಟಿದ್ದಾರೆ. ಒಂದು ವೇಳೆ ಬಿಎಸ್ ವೈ ಅವರನ್ನು ಸಿ.ಎಂ ಸ್ಥಾನದಿಂದ ಕೆಳಗಿಳಿಸಿದರೆ ಬಿಜೆಪಿ ಪಕ್ಷ ಒಬ್ಬ ಉತ್ತಮ ನಾಯಕನನ್ನು ಕಳೆದುಕೊಳ್ಳುತ್ತದೆ ಹಾಗೂ ಬಿಜೆಪಿ ಪಕ್ಷ ಭಾರಿ ಅನಾಹುತವನ್ನು ಎದುರಿಸಬೇಕಾಗುತ್ತದೆ ಎಂದರು.

ಬಿ.ಎಸ್.ವೈ ಅವರು ಹೋರಾಟದಿಂದಲೇ ಸರ್ಕಾರವನ್ನು ಕಟ್ಟಿ, ಬೆಳೆಸಿದ್ದಾರೆ. ದಕ್ಷಿಣ ಭಾರತದಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತರುವಲ್ಲಿ ಬಿ.ಎಸ್.ವೈ ಪ್ರಮುಖವಾದವರು. ಅವರು ರಾಜ್ಯದಲ್ಲಿ ಕರೋನಾ ಪರಿಸ್ಥಿತಿಯನ್ನು ಬಹಳ ಪ್ರಾಮಾಣಿಕವಾಗಿ ನಿರ್ವಹಣೆ ಮಾಡಿದ ಕಾರಣ ಕೇಂದ್ರ ಸರ್ಕಾರವು ಕೂಡ ಬಿ.ಎಸ್.ವೈ ಅವರನ್ನು ಶ್ಲಾಘಿಸಿದೆ ಇಂತಹ ಸಮಯದಲ್ಲಿ ನಾಯಕತ್ವ ಬದಲಾವಣೆ ಮಾಡುವುದು ಎಷ್ಟರ ಮಟ್ಟಿಗೆ ಸರಿ ಎಂದು ಶ್ರೀ  ಮುರುಘಾ ಶರಣರವರು ಹೈಕಮಾಂಡ್ ಗೆ ಪ್ರಶ್ನಿಸಿದರು.

Key words: Ignoring- BS Yeddyurappa – BJP- Warning- Muruga shri