ಪಿವಿ ಸಿಂಧು ನನ್ನ ಮದುವೆಯಾಗದಿದ್ದರೆ ಕಿಡ್ನ್ಯಾಪ್ ಮಾಡ್ತೀನಿ ಎಂದ 70ರ ಹರೆಯದ ಅಜ್ಜ

Promotion

ಬೆಂಗಳೂರು, ಸೆಪ್ಟೆಂಬರ್ 18, 2019 (www.justkannada.in): ತಮಿಳುನಾಡಿನ 70 ವರ್ಷದ ಹಿರಿಯ ನಾಗರಿಕ ಮಲಯಸ್ವಾಮಿ ಪಿ.ವಿ.ಸಿಂಧು ಅವರನ್ನು ಮದುವೆಯಾಗುವುದಾಗಿ ಹೇಳುತ್ತಿದ್ದಾರೆ!

ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್‌ಷಿಪ್‌ನಲ್ಲಿ ಈಚೆಗೆ ಚಿನ್ನದ ಪದಕ ಗೆದ್ದ ಪಿ.ವಿ. ಸಿಂಧು ಅವರಿಗೆ ಎಲ್ಲ ಕಡೆಯೂ ಸನ್ಮಾನಗಳ ಮಹಾಪೂರ ಹರಿದಿದೆ. ಆದರೆ ರಾಮನಾಥಪುರಂ ಜಿಲ್ಲೆಯ ಮ್ಯಾಜಿಸ್ಟ್ರೇಟ್‌ ನಡೆಸಿದ ಸಾಪ್ತಾಹಿಕ ಜನಸ್ಪಂದನದಲ್ಲಿ ಈ ಬಗ್ಗೆ ಅರ್ಜಿ ಸಲ್ಲಿಸಿದ್ದಾರೆ ಮಲಯಸ್ವಾಮಿ.

‘ನನಗೆ ಈಗ 16 ವರ್ಷ ವಯಸ್ಸು (ಜನನ; 4ನೇ ಏಪ್ರಿಲ್ 2004) ಆಗಿದೆ. ಸಿಂಧು ಸಾಧನೆಯಿಂದ ಮರುಳಾಗಿದ್ದೇನೆ. ಅವರನ್ನು ಜೀವನಸಂಗಾತಿಯಾಗಿ ಪಡೆಯಲು ಇಚ್ಛಿಸುತ್ತೇನೆ’ ಎಂದು ಬರೆದಿದ್ದಾರೆ. ‘ಒಂದೊಮ್ಮೆ ಅವರು ಮದುವೆಗೆ ಒಪ್ಪದಿದ್ದರೆ ಅಪಹರಿಸಿಕೊಂಡು ಹೋಗುತ್ತೇನೆ’ ಎಂದು ಹೇಳಿದ್ದಾರೆ!