ಸಂಪುಟದಿಂದ ಕೈ ಬಿಟ್ರೆ ವಿಶ್ರಾಂತಿ ಪಡೆಯುವೆ- ಸಚಿವ ಆರ್.ವಿದೇಶಪಾಂಡೆ ಹೇಳಿಕೆ…

Promotion

ಕಾರವಾರ,ಮೇ,29,2019(www.justkanna.in):  ಸಂಪುಟ ವಿಸ್ತರಣೆ ವೇಳೆ  ನನ್ನನ್ನ ಸಚಿವ ಸಂಪುಟದಿಂದ ಕೈಬಿಟ್ಟರೇ ವಿಶ್ರಾಂತಿ ಪಡೆಯುತ್ತೇನೆ ಎಂದು ಕಂದಾಯ ಸಚಿವ ಆರ್.ವಿ ದೇಶಪಾಂಡೆ ತಿಳಿಸಿದರು.

ಕಾರವಾರದಲ್ಲಿ ಇಂದು ಮಾಧ್ಯಮದ ಜತೆ ಮಾತನಾಡಿದ ಸಚಿವ ಆರ್.ವಿ ದೇಶಪಾಂಡೆ, ಜೆಡಿಎಸ್ ಜತೆ ಮೈತ್ರಿಯಿಂದ ಕಾಂಗ್ರೆಸ್ ಗೆ ಹಿನ್ನಡೆಯಾಗಿದೆ ಎಂಬುವುದನ್ನ ನಾನು ಒಪ್ಪುವುದಿಲ್ಲ.  ಕೆಲವು ಕಡೆ ನಿರೀಕ್ಷಿತ ಮಟ್ಟದಲ್ಲಿ ಮೈತ್ರಿ  ಕೆಲಸಮಾಡಿಲ್ಲ. ನಮ್ಮ ತಪ್ಪಿಗೆ ಪಾಠ ಕಲಿಯುವ ಅಗತ್ಯವಿದೆ ಎಂದರು.

ಹಾಗೆಯೇ  ಸಿಎಂ ಸ್ಥಾನ ಖಾಲಿ ಇಲ್ಲ. ಸದ್ಯ ನಾನು ಸಿಎಂ ಸ್ಥಾನದ ಆಕಾಂಕ್ಷಿಯೂ ಅಲ್ಲ.  ಸಚಿವ ಸಂಪುಟ ವಿಸ್ತರಣೆ ಹೈಕಮಾಂಡ್ ನಿರ್ಧಾರಕ್ಕೆ ಬಿಟ್ಟಿದ್ದು. ನನ್ನನ್ನ ಸಂಪುಟದಿಂದ ಕೈಬಿಟ್ಟರೇ ನಾನು ವಿಶ್ರಾಂತಿ ಪಡೆಯುತ್ತೇನೆ ಎಂದು ಆರ್.ವಿ ದೇಶಪಾಂಡೆ ತಿಳಿಸಿದರು.

ಸಚಿವ ಸಂಪುಟ ವಿಸ್ತರಣೆ ವೇಳೆ ಹಿರಿಯರಿಗೆ ಹಾಗೂ ಕೆಲ ಸಚಿವರಿಗೆ ಕೋಕ್ ಕೊಟ್ಟು ಅತೃಪ್ತ ಶಾಸಕರಿಗೆ ಸ್ಥಾನ ನೀಡುವ ಬಗ್ಗೆ ಮೈತ್ರಿ ಸರ್ಕಾರ ಚಿಂತನೆ ನಡೆಸಿದೆ ಎನ್ನಲಾಗುತ್ತಿದೆ.

Key words: If I leave the cabinet, I will rest-  Minister R.V Deshapande

#RVDeshapande #karawar #cabinet,