ಟೆಸ್ಟ್ ಚಾಂಪಿಯನ್’ಶಿಪ್ ಫೈನಲ್ಸ್: ಟೈ ಬ್ರೇಕರ್ ಇಲ್ಲ ಎಂದ ಐಸಿಸಿ

Promotion

ಬೆಂಗಳೂರು, ಮೇ 29, 2021 (www.justkannada.in): ಚೊಚ್ಚಲ ವಿಶ್ವಕಪ್‌ ಟೆಸ್ಟ್‌ ಫೈನಲ್‌ ಪಂದ್ಯ ಸ್ಪಷ್ಟ ಫಲಿತಾಂಶ ಬಾರದಿದ್ದರೆ ಮುಂದೇನು ಎಂಬ ಪ್ರಶ್ನೆಗೆ ಐಸಿಸಿ ಉತ್ತರ ಹುಡುಕಿದೆ.

ವಿಶ್ವಕಪ್‌ ಟೆಸ್ಟ್‌ ಫೈನಲ್‌ ಪಂದ್ಯ ಸ್ಪಷ್ಟ ಫಲಿತಾಂಶ ಬಾರದಿದ್ದರೆ ಎರಡೂ ತಂಡಗಳನ್ನು ಜಂಟಿ ವಿಜೇತರೆಂದು ತೀರ್ಮಾನಿಸಿ ಎರಡೂ ತಂಡಗಳಿಗೆ ಟ್ರೋಫಿ ನೀಡುವ ತೀರ್ಮಾನಕ್ಕೆ ಐಸಿಸಿ ಬಂದಿದೆ.

ಯಾವುದೇ ರೀತಿಯ ಟೈ ಬ್ರೇಕರ್‌ ನಿಯಮವನ್ನು ಅಳವಡಿಸದಿರಲು ನಿರ್ಧರಿಸಿದೆ. ಇದಕ್ಕೆ ಕ್ರಿಕೆಟ್ ಅಭಿಮಾನಿಗಳಿಂದ ಅಸಮಾಧಾನ ವ್ಯಕ್ತವಾಗಿದೆ.

ಅನಿವಾರ್ಯವಿದ್ದರಷ್ಟೇ ಮೀಸಲು ದಿನವನ್ನು ಇರಿಸಿಕೊಳ್ಳಲಾಗುವುದು ಎಂದು ಐಸಿಸಿ ಸ್ಪಷ್ಟಪಡಿಸಿದೆ.

ಫೈನಲ್‌ ಪಂದ್ಯಕ್ಕೆ ಮೀಸಲು ದಿನದ ಅಗತ್ಯವನ್ನು ಯಾವಾಗ ನಿರ್ಧರಿಸಲಾಗುತ್ತದೆ ಎಂಬ ಪ್ರಶ್ನೆಗೂ ಐಸಿಸಿ ಪರಿಹಾರ ಒದಗಿಸಿದೆ. ಅಂತಿಮ ದಿನದಾಟದ ಕೊನೆಯ ಒಂದು ಗಂಟೆಯ ಅವಧಿಯಲ್ಲಿ “ರಿಸರ್ವ್‌ ಡೇ’ ನಿರ್ಧಾರಕ್ಕೆ ಬರಲಾಗುವುದು ಎಂದಿದೆ.