ಐಸಿಸಿ ಟಿ-20 ರ‍್ಯಾಂಕಿಂಗ್​: ರೋಹಿತ್ ಶರ್ಮಾ, ಕೆ.ಎಲ್.ರಾಹುಲ್’ಗೆ 10ರೊಳಗೆ ಸ್ಥಾನ

ಚೆನ್ನೈ, ಸೆಪ್ಟೆಂಬರ್ 27, 2019 (www.justkannada.in): ನೂತನ ಐಸಿಸಿ ಟಿ-20 ರ‍್ಯಾಂಕಿಂಗ್ ಪ್ರಕಟವಾಗಿದ್ದು, ಟಿ20 ರ‍್ಯಾಂಕಿಂಗ್​ನಲ್ಲಿ ರೋಹಿತ್ ಶರ್ಮಾ(664 ಅಂಕ) ಬ್ಯಾಟಿಂಗ್ ವಿಭಾಗದಲ್ಲಿ ಎಂಟನೇ ಸ್ಥಾನ ಕಾಯ್ದುಕೊಂಡಿದ್ದಾರೆ.

ಪಾಕ್ ಆಟಗಾರ ಬಾಬರ್ ಅಜಮ್ (896 ಅಂಕ) ಭಾರಿ ಅಂತರದಲ್ಲಿ​ ಅಗ್ರಸ್ಥಾನದಲ್ಲೇ ಮುಂದುವರೆದಿದ್ದಾರೆ. ಎರಡನೇ ಸ್ಥಾನದಲ್ಲಿ ಆಸೀಸ್ ಆಲ್​ರೌಂಡರ್ ಗ್ಲೆನ್ಸ್ ಮ್ಯಾಕ್ಸ್​ವೆಲ್( 815 ಅಂಕ) ಕಾಣಿಸಿಕೊಂಡಿದ್ದಾರೆ.

ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ( 659 ಅಂಕ) ಒಂದು ಸ್ಥಾನ ಏರಿಕೆಯೊಂದಿಗೆ 11ನೇ ಸ್ಥಾನ ಪಡೆದಿದ್ದಾರೆ. ಅಗ್ರ ಹತ್ತರಲ್ಲಿ ಇನ್ನೋರ್ವ ಆಟಗಾರನೆಂದರೆ ಕನ್ನಡಿಗ ಕೆ.ಎಲ್.ರಾಹುಲ್( 662 ಅಂಕ).