ನೂತನ ಸರ್ಕಾರದಲ್ಲಿ ನನಗೆ ಸಚಿವ ಸ್ಥಾನ ಬೇಡ- ಪ್ರಧಾನಿ ಮೋದಿಗೆ ಅರುಣ್ ಜೆಟ್ಲಿ ಪತ್ರ…

Promotion

ನವದೆಹಲಿ,ಮೇ,29,2019(www.justkannada.in):  ಕಳೆದ ಬಾರಿ ಕೇಂದ್ರ ಸರ್ಕಾರದಲ್ಲಿ ಹಣಕಾಸು ಸಚಿವರಾಗಿ ಕಾರ್ಯ ನಿರ್ವಹಿಸಿದ್ದ ಅರುಣ್ ಜೇಟ್ಲಿ ಅವರು ಇಂದು ನೂತನ ಸರ್ಕಾರದಲ್ಲಿ ಸಚಿವ ಸ್ಥಾನ ಬೇಡ ಎಂದು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದಾರೆ.

ಅರುಣ್ ಜೆಟ್ಲಿ ಅವರು ಸಚಿವ ಸ್ಥಾನ ತ್ಯೆಜಿಸಲು ಕಾರಣವನ್ನ ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದಿರುವ ತಿಳಿಸಿದ್ದಾರೆ.ಪ್ರತಿ ಬಾರಿಯೂ ನಾನು ಎನ್ ಡಿಎ ಸರ್ಕಾರದಲ್ಲಿ ಸಚಿವನಾಗಿದ್ದೆ. ನನಗೆ ಅವಕಾಶ ಕೊಟ್ಟಿದ್ದ ನಾಯಕರಿಗೆ ಧನ್ಯವಾದ ಅರ್ಪಿಸುತ್ತೇನೆ.  ಈ ಬಾರಿ ಸಂಪುಟ ಸೇರಲು ಅಸಹಾಯಕನಾಗಿದ್ದೇನೆ ಸರ್ಕಾರ ನೀಡಿದ ಜವಾಬ್ದಾರಿ ನಿರ್ವಹಿಸೋದು ಕಷ್ಟ. ಕಳೆದ 18 ತಿಂಗಳಿಂದ ನನ್ನ ಆರೋಗ್ಯ ಕೆಟ್ಟಿದೆ. ಹೀಗಾಗಿ ನನಗೆ ವಿಶ್ರಾಂತಿ ಬೇಕಿದೆ. ಹೀಗಾಗಿ ನನಗೆ ಸಚಿವ ಸ್ಥಾನ ಬೇಡ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಹಾಗೆಯೇ ನಾನು ಪಕ್ಷ ಹಾಗೂ ಕೇಂದ್ರ ಸರ್ಕಾರದ ಪರವಾಗಿ ಇರುತ್ತೇನೆ ಎಂದು ಅರುಣ್ ಜೇಟ್ಲಿ ತಿಳಿಸಿದ್ದಾರೆ. ಕಳೆದ ಸರ್ಕಾರದಲ್ಲಿ ಅರುಣ್ ಜೇಟ್ಲಿ ಅವರು ಹಣಕಾಸು ಸಚಿವರಾಗಿ ಕಾರ್ಯ ನಿರ್ವಹಿಸಿದ್ದರು. ಈ ನಡುವೆ  ಆಗ್ಗಾಗ್ಗೆ ಅವರು ಅನಾರೋಗ್ಯಕ್ಕೆ ಒಳಗಾಗುತ್ತಿದ್ದರು. ಹೀಗಾಗಿ ಈ ಬಾರಿ ಸಚಿವ ಸ್ಥಾನಬೇಡವೆಂದು ಪ್ರಧಾನಿ ಮೋದಿಗೆ ಪತ್ರ ಬರೆದಿದ್ದಾರೆ.

Key words: I do not want a minister in the new government-Arun Jaitley letter to Prime Minister narendra Modi

#ArunJaitley #narendramodi #letter #newdehli