ರೈತರು, ನೇಕಾರರು ನನ್ನ ಕಣ್ಣುಗಳಿದ್ದಂತೆ: ಮೂರುವರೆ ವರ್ಷ ನಾನೇ ಸಿಎಂ- ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ವಿಶ್ವಾಸ….

Promotion

ಹಾವೇರಿ,ನ,29,2019(www.justkannada.in): ನಮಗೆ ಬಹುಮತ ಬರುತ್ತದೆ. ಮೂರುವರೆ ವರ್ಷಗಳ ಕಾಲ ನಾನೇ ಸಿಎಂ ಆಗಿರುತ್ತೇನೆ ಎಂದು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ವಿಶ್ವಾಸ ವ್ಯಕ್ತಪಡಿಸಿದರು.

ಹಾವೇರಿಯಲ್ಲಿ ಇಂದು ಮಾತನಾಡಿದ ಸಿಎಂ ಬಿಎಸ್ ಯಡಿಯೂರಪ್ಪ, ನಮಗೆ ಯಾರ ಸಹಕಾರವೂ ಬೇಡ. ಉಪಚುನಾವಣೆಯಲ್ಲಿ ಗೆಲವಿನ ಮೂಲಕ ಬಹುಮತ ಬರುತ್ತದೆ.  ಬೇರೆಯವರು ಸರ್ಕಾರ ರಚಿಸುವ ಪ್ರಮಯವೇ ಬರಲ್ಲ. ಯಾರು ಏನೇ ಹೇಳಿದರೂ ಜನ ನಮ್ಮ ಪರವಾಗಿ ಇದ್ದಾರೆ. ಉಪಚುನಾವಣೆ ನಡೆಯುತ್ತಿರುವ 15 ಕ್ಷೇತ್ರಗಳಲ್ಲೂ ನಾವೇ ಗೆಲ್ಲುತ್ತೇವೆ ಎಂದರು ತಿಳಿಸಿದರು.

ನನಗೆ ಜಾತಿ ರಾಜಕಾರಣ ಗೊತ್ತಿಲ್ಲ. ಎಲ್ಲರೂ ಒಂದೆ.  ನೇಕಾರರು ರೈತರು ನನ್ನ ಕಣ್ಣುಗಳಿದ್ದಂತೆ. ಮೂರುವರೆ ವರ್ಷದಲ್ಲಿ ನಾನು ರಾಜ್ಯವನ್ನ ಮಾದರಿ ರಾಜ್ಯವನ್ನಾಗಿ ಮಾಡ್ತೇನೆ. ಎಲ್ಲರಿಗೂ ಅನುಕೂಲವಾಗುವ ಯೋಜನೆಗಳನ್ನ ತರುತ್ತೇನೆ. ಆಗ ನೀವೆ ಹೇಳುತ್ತೀರಿ ಉತ್ತಮವಾಗಿ ಕೆಲಸ ಮಾಡುತ್ತಿದ್ದಾರೆ ಅಂತಾ ಎಂದು ಸಿಎಂ ಬಿಎಸ್ ವೈ ನುಡಿದರು.

Key words:  I am – CM -three and a half years- Chief Minister -BS Yeddyurappa -confident.