ಸಿದ್ಧರಾಮಯ್ಯ ಮನೆ ಬಳಿ ಹೈಡ್ರಾಮಾ:  ಸಂಗ್ರಹಿಸಿದ್ಧ ಚಡ್ಡಿಗಳನ್ನ ತಂದು ಬಿಜೆಪಿ ಕಾರ್ಯಕರ್ತರಿಂದ ಪ್ರತಿಭಟನೆ.

Promotion

ಬೆಂಗಳೂರು,ಜೂನ್,7,2022(www.justkannada.in): ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಚಡ್ಡಿ ಸಂಘರ್ಷ ತೀವ್ರಗೊಂಡಿದ್ದು, ಸಂಗ್ರಹಿಸಿದ್ದ ಚಡ್ಡಿಗಳನ್ನ ಮಾಜಿ ಸಿಎಂ ಸಿದ್ಧರಾಮಯ್ಯ ಮನೆ ಬಳಿ ತಂದು ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ಚಡ್ಡಿಗಳನ್ನ ಸುಡುವ ಮೂಲಕ ಆರ್ ಎಸ್ ಎಸ್ ವಿರುದ್ಧ ಕಾಂಗ್ರೆಸ್ ತಮ್ಮ ಆಕ್ರೋಶ ವ್ಯಕ್ತಪಡಿಸುತ್ತಿದ್ದರೇ ಇತ್ತ ಕಾಂಗ್ರೆಸ್ ನಡೆಯನ್ನ ಖಂಡಿಸಿ ಬಿಜೆಪಿ ಚಡ್ಡಿಗಳನ್ನ ಸಂಗ್ರಹಿಸಿ ಕಾಂಗ್ರೆಸ್ ನಾಯಕರ ಮನೆಗೆ ಪೋಸ್ಟ್ ಮಾಡುತ್ತಿದೆ. ಈ ಮಧ್ಯೆ ಬಿಜೆಪಿ ಎಸ್ ಸಿ ಮೋರ್ಚಾ ವತಿಯಿಂದ ಎಂಎಲ್ ಸಿ ಛಲವಾದಿ ನಾರಾಯಣಸ್ವಾಮಿ ನೇತೃತ್ವದಲ್ಲಿ ಮಾಜಿ ಸಿಎಂ ಸಿದ್ಧರಾಮಯ್ಯ ಅವರ ಬೆಂಗಳೂರಿನ ಕುಮಾರಕೃಪಾ ನಿವಾಸಕ್ಕೆ ಜಮಾಯಿಸಿ ಪ್ರತಿಭಟನೆ ನಡೆಸಿದರು. ಈ ವೇಳೆ ಬಾಕ್ಸ್ ಗಳಲ್ಲಿ ಸಂಗ್ರಹಿಸಿದ್ದ ಚಡ್ಡಿಗಳನ್ನ ತಂದು ರವಾನಿಸಲು ಯತ್ನಿಸಿದರು.

ಈ ಮಧ್ಯೆ ಗಾಂಧಿಭವನದ ಬಳಿಯೇ ಪೊಲೀಸರು ಪ್ರತಿಭಟನಾಕಾರರನ್ನ ತಡೆದು ಬಂಧಿಸಿದರು. ಈ ವೇಳೆ ಮಾತನಾಡಿದ ಛಲವಾದಿ ನಾರಾಯಣಸ್ವಾಮಿ, ಚಡ್ಡಿಯನ್ನ ಸಂಗ್ರಹಿಸಿ ತಂದಿದ್ದೇವೆ ಎಷ್ಟು ಸುಡುತ್ತಾರೋ ಸುಡಲಿ. ಅವ್ರು ಎಷ್ಟು ಚಡ್ಡಿಗಳನ್ನ ಸುಡುತ್ತಾರೋ ಅಷ್ಟು ಚಡ್ಡಿಗಳನ್ನ ರವಾನಿಸುತ್ತೇವೆ. ಆರ್ ಎಸ್ ಎಸ್ ಇಲ್ಲದಿದ್ರೆ ನಿಮ್ಮ ಚಡ್ಡಿ ಉಳಿಯುತ್ತಿರಲಿಲ್ಲ ಎಂದು ಕಿಡಿಕಾರಿದರು.

Key words: Hydrama – Siddaramaiah- house-Protests – BJP activists