ಪತ್ನಿಯನ್ನ ಬೆಂಕಿಹಚ್ಚಿ ಕೊಂದು ಬಳಿಕ ತಾನೂ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾದ ಪತಿರಾಯ…

Promotion

ದೊಡ್ಡಬಳ್ಳಾಪುರ,ಮೇ,20,2019(www.justkannada.in): ಪತಿಯೊಬ್ಬ  ಪತ್ನಿಗೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿ ಕೊಂದ ಬಳಿಕ ತಾನೂ ಸಹ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ದೊಡ್ಡಬಳ್ಳಾಪುರದಲ್ಲಿ ನಡೆದಿದೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರದ ಚೆನ್ನಾಪುರ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಲಕ್ಷ್ಮಮ್ಮ (60) ಮೃತಪಟ್ಟ ಪತ್ನಿ. ನಾರಾಯಣ(70) ಆತ್ಮಹತ್ಯೆಗೆ ಶರಣಾದ ಪತಿ. ನಾರಾಯಣ ಮಕ್ಕಳು ಮತ್ತು ಪತ್ನಿಗೆ ತಿಳಿಸದೆ ಜಮೀನು ಮಾರಾಟ ಮಾಡಿದ್ದ. ನಂತರ ಮಹಿಳೆಯೊಂದಿಗೆ ಓಡಿ ಹೋಗಿದ್ದ. ಹಣ ಖಾಲಿಯಾದ ನಂತರ ಊರಿಗೆ ವಾಪಸ್ಸು ಬಂದಿದ್ದ.

ಈ ನಡುವೆ ಹೆಂಡತಿ ಮತ್ತು ಮಕ್ಕಳು ಮನೆಗೆ ಸೇರಿಸುತ್ತಿಲ್ಲ ಎಂದು ಮಲಗಿದ್ದ ಪತ್ನಿ ಮೇಲೆ ಸೀಮೆ ಎಣ್ಣೆ ಸುರಿದು ಬೆಂಕಿಹಚ್ಚಿ ಕೊಂದಿದ್ದಾನೆ. ನಂತರ ತಾನೂ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾನೆ ಎನ್ನಲಾಗಿದೆ. ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

Key words: husband killed Wife, after he committed suicide

#crimenews #doddaballapura #kill #wife