ಗರಿಗೆದರಿದ ಹುಣಸೂರು ಉಪಚುನಾವಣಾ ಕಣ: ಅನರ್ಹ ಶಾಸಕ ಹೆಚ್.ವಿಶ್ವನಾಥ್ ಪುತ್ರರಿಂದ ಪ್ರಚಾರ…

Promotion

ಮೈಸೂರು,ಅ,26,2019(www.justkannada.in): ರಾಜ್ಯದಲ್ಲಿ 15 ಕ್ಷೇತ್ರಗಳಿಗೆ ಉಪಚುನಾವಣೆ ಹಿನ್ನೆಲೆ ರಾಜಕೀಯ ಚಟುವಟಿಕೆಗಳು ಗರಿಗೆದರಿದೆ. ಈ ಮಧ್ಯೆ ಅನರ್ಹ ಶಾಸಕರ ತೀರ್ಪನ್ನ ಸುಪ್ರೀಂಕೋರ್ಟ್ ಮುಂದಕ್ಕೆ ಹಾಕಿರುವ ಹಿನ್ನೆಲೆ ಚುನಾವಣಾ ಆಕಾಂಕ್ಷಿಗಳ ಸಿದ್ಧತೆ ಜೋರಾಗಿದೆ.

ಅಂತೆಯೇ ಭಾರಿ ಕುತೂಹಲಕ್ಕೆ ಕಾರಣವಾಗಿರುವ ಹುಣಸೂರು ಕ್ಷೇತ್ರದ ಉಪಚುನಾವಣಾ ಕಣ ರಂಗೇರಿದ್ದು ಅನರ್ಹ ಶಾಸಕ ಹೆಚ್.ವಿಶ್ವನಾಥ್ ಪರ ಅವರ ಪುತ್ರರು ಪ್ರಚಾರಕ್ಕಿಳಿದಿದ್ದಾರೆ. ಹೆಚ್. ವಿಶ್ವನಾಥ್ ಕುಟುಂಬ ಉಪ ಚುನಾವಣೆಯನ್ನು ಸವಾಲಾಗಿ ಸ್ವೀಕಾರ ಮಾಡಿದ್ದಾರೆ ಎನ್ನಲಾಗಿದ್ದು,  ಹೀಗಾಗಿ  ಹೆಚ್.ವಿಶ್ವನಾಥ್ ಮಕ್ಕಳ ಹೆಗಲಿಗೆ ಪ್ರಚಾರದ ಹೊಣೆ ಹೊರಸಿದ್ದಾರೆ.

ಮಾಜಿ ಸಚಿವ ವಿಶ್ವನಾಥ್ ಪುತ್ರರಾದ ಸಂತೋಷ ಹಾಗೂ ಹಾಲಿ ಜಿಲ್ಲಾ ಪಂಚಾಯತ್ ಸದಸ್ಯರಾಗಿರುವ ಅಮಿತ್ ಹಳ್ಳಿ ಹಳ್ಳಿಗಳಲ್ಲಿ ಪ್ರಚಾರ ಮಾಡುತ್ತಿದ್ದು, ವಿಶ್ವನಾಥ್ ಗೆ ಚುನಾವಣೆಯಲ್ಲಿ ಅವಕಾಶ ಸಿಗದೆ ಇದ್ದರೇ ಪುತ್ರ ಅಮಿತ್ ದೇವರಹಟ್ಟಿ ತಾವೇ ಸ್ಪರ್ಧಿಸುವ ಸಾಧ್ಯತೆ ಇದೆ.

Key words: hunsur- by-election-disqualified MLA-H.vishwnath- sons