ನಕಲಿ ರೆಮ್ಡಿಸಿವಿರ್ ಔಷಧಿ ಮಾರಾಟ ಬೃಹತ್ ಜಾಲ ಪತ್ತೆ:  ಸಂಪೂರ್ಣ ವಿವರ ನೀಡಿದ ನಗರ ಪೋಲಿಸ್ ಆಯುಕ್ತ ಚಂದ್ರಗುಪ್ತ..

Promotion

ಮೈಸೂರು,ಏಪ್ರಿಲ್,19,2021(www.justkannada.in):  ಮೈಸೂರಿನಲ್ಲಿ ನಕಲಿ ರೆಮ್ಡಿಸಿವಿರ್ ಔಷಧಿ ಮಾರಾಟ ಬೃಹತ್ ಜಾಲ ಪತ್ತೆಯಾಗಿದ್ದು  ನಕಲಿ ಔಷಧಿ ಮಾರಾಟಗಾರನನ್ನ ಬಂಧಿಸಲಾಗಿದೆ ಎಂದು ಮೈಸೂರು ನಗರ ಪೋಲಿಸ್ ಆಯುಕ್ತ ಚಂದ್ರಗುಪ್ತ ಅವರು ತಿಳಿಸಿದ್ದಾರೆ.jk

ಈ ಕುರಿತು ಸುದ್ಧಿಗೋಷ್ಠಿ ನಡೆಸಿ ಮಾಹಿತಿ ನೀಡಿದ ಪೋಲಿಸ್ ಆಯುಕ್ತ ಚಂದ್ರಗುಪ್ತ, ಆರೋಪಿಯಿಂದ 2.82,000 ರೂ.  ನಗದು ಸೇರಿದಂತೆ ನಕಲಿ ಔಷಧಿ ವಶಕ್ಕೆ ಪಡೆಯಲಾಗಿದೆ. ಸ್ಟಾಪ್ ನರ್ಸ್ ನಿಂದ ಈ ಕೃತ್ಯ ವೆಸಗಲಾಗಿದೆ.

ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದ ಗಿರೀಶ್ ಎಂಬಾತ ಹಲವು ತಿಂಗಳಿನಿಂದ ನಕಲಿ ಔಷಾಧಿ ಮಾರಾಟ ಮಾಡುತ್ತಿದ್ದ. ಖದೀಮ ಬಳಕೆಯಾದ ಬಾಟೆಲ್ ಗಳ ಬಳಕೆ ಮಾಡುತ್ತಿದ್ದನು. ಬಳಕೆಯಾದ ರೆಮ್ಡಿಸಿವಿರ್ ಬಾಟಲಿಗೆ ಸೆಪ್ಟ್ರಿಯಾಕ್ಸೊನ ಎಂಬ ಆ್ಯಂಟಿಬಯೋಟಿಕ್  ಔಷಧ ಹಾಗೂ ನಾರ್ಮಲ್ ಸಲೈನ್ ಬಳಸುತ್ತಿದ್ದ. ಖಾಲಿ ಬಾಟೆಲ್ ಗಳನ್ನ  ಶಿವಪ್ಪ ಮಂಗಳ ಎಂಬುವವರು ಸಪ್ಲೆ ಮಾಡುತ್ತಿದ್ದರು ಎಂದು ತಿಳಿಸಿದರು.

ಇನ್ನು ಈ ಕೃತ್ಯದಲ್ಲಿ   ಪ್ರಶಾಂತ್ ಹಾಗೂ ಮಂಜುನಾಥ್ ಎಂಬ ಇಬ್ಬರು ಭಾಗಿಯಾಗಿದ್ದರೆ. ಅವರನ್ನು ವಶಕ್ಕೆ ಪಡೆದ ವಿಚಾರಣೆ ನಡೆಸಲಾಗುತ್ತಿದೆ ಎಂದು ತಿಳಿಸಿದರು.

Key words: Huge network fake -remdisovir – sales –arrest-mysore