ಐಪಿಎಲ್ ಪಂದ್ಯಾವಳಿ ಸ್ಥಗಿತದಿಂದ ಬಿಸಿಸಿಐಗೆ ಆದ ನಷ್ಟ ಎಷ್ಟು ಗೊತ್ತಾ?!

Promotion

ಬೆಂಗಳೂರು, ಮೇ 05, 2021 (www.justkannada.in): 

ಈ ಬಾರಿಯ ಐಪಿಎಲ್ ಸ್ಥಗಿತದಿಂದ ಬಿಸಿಸಿಐಗೆ 2,200 ಕೋಟಿ ರೂಪಾಯಿ ನಷ್ಟವಾಗಿದೆ ಎಂಬ ಮಾಹಿತಿ ಹೊರಬಿದ್ದಿದೆ.

ಆಟಗಾರರಿಗೆ ಕೋವಿಡ್ ದೃಢಪಟ್ಟ ಹಿನ್ನೆಲೆಯಲ್ಲಿ ಐಪಿಎಲ್ ಟೂರ್ನಿಯನ್ನು ಅನಿರ್ದಾಷ್ಟವದಿ ಕಾಲಕ್ಕೆ ಮುಂದೂಡಲಾಗಿತ್ತು. ಇದರಿಂದ ಬಿಸಿಸಿಐಗೆ ಅಪಾರ ನಷ್ಟವಾಗಿದೆ.

ಇದರಲ್ಲಿ ಅತೀ ದೊಡ್ಡ ಪಾಲು ಟೂರ್ನಿ ಪ್ರಸಾರ ಹಕ್ಕು ಪಡೆದಿರುವ ಸ್ಟಾರ್ ಸ್ಪೋರ್ಟ್ಸ್ ವಾಹಿನಿಯದ್ದಾಗಿದೆ.

ಐಪಿಎಲ್ 5 ವರ್ಷಗಳ ಪ್ರಸಾರ ಹಕ್ಕನ್ನು ಬಿಸಿಸಿಐ ಬರೋಬ್ಬರಿ 16,347 ಕೋಟಿ ರೂಪಾಯಿಗೆ ಸ್ಟಾರ್ ಸ್ಪೋರ್ಟ್ಸ್ ವಾಹಿನಿಗೆ ಮಾರಾಟ ಮಾಡಿದೆ.

ಟೈಟಲ್ ಪ್ರಾಯೋಜಕತ್ವ ಪಡೆದಿರುವ ವಿವೋ ಪ್ರತಿ ಆವೃತ್ತಿಗೆ 440 ಕೋಟಿ ರೂಪಾಯಿಗೆ ಬಿಸಿಸಿಐಗೆ ಪಾವತಿಸುತ್ತದೆ. ಈಗ ಕೂಟ ರದ್ದಾಗಿರುವ ಹಿನ್ನೆಲೆಯಲ್ಲಿ ಆ ಆದಾಯಕ್ಕೂ ಕುತ್ತು ಬಂದಿದೆ.