ತಾಯಿ, ಅವಳಿ ಮಕ್ಕಳು ಸಾವು: ಜಿಲ್ಲಾಸ್ಪತ್ರೆ ವೈದ್ಯರ ವಿರುದ್ಧ ನಿರ್ಲಕ್ಷ್ಯ ಆರೋಪ.

ತುಮಕೂರು,ನವೆಂಬರ್,3,2022(www.justkannada.in): ತುಮಕೂರು ಜಿಲ್ಲಾಸ್ಪತ್ರೆ ವೈದ್ಯರ ನಿರ್ಲಕ್ಷ್ಯಕ್ಕೆ ತಾಯಿ ಹಾಗೂ ಅವಳಿ ಮಕ್ಕಳು ಬಲಿಯಾಗಿರುವ ಘಟನೆ ಿಂದು ನಡೆದಿದೆ.

ಅವಳಿ ಮಕ್ಕಳಿಗೆ ಜನ್ಮ ನೀಡುತ್ತಲೇ ತಾಯಿ ಕಸ್ತೂರಿ ಸಾವನ್ನಪ್ಪಿದ್ದು ಆಗತಾನೇ ಜನಿಸಿದ್ಧಅವಳಿ ಮಕ್ಕಳು ಸಹ ಕೊನೆಯುಸಿರೆಳೆದಿವೆ.   ತಾಯಿ ಮತ್ತು ಮಕ್ಕಳ ಸಾವಿಗೆ ತುಮಕೂರು ಜಿಲ್ಲಾಸ್ಪತ್ರೆ ವೈದ್ಯರು ಚಿಕಿತ್ಸೆ ನೀಡಿದೆ ನಿರಾಕರಿಸಿ ನಿರ್ಲಕ್ಷ್ಯ ತೊರಿದ್ದೇ ಕಾರಣ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಕಸ್ತೂರಿ ತಮಿಳುನಾಡು ಮೂಲದವರಾಗಿದ್ದು, ಕಳೆದ ಒಂದು ತಿಂಗಳಿನಿಂದ ಭಾರತಿ ನಗರದಲ್ಲಿ ವಾಸವಿದ್ದರು.  ಒಂದು ಹೆಣ್ಣು ಮಗು ಜೊತೆ 30 ವರ್ಷದ ಕಸ್ತೂರಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು.

9 ತಿಂಗಳ ಗರ್ಭಿಣಿ ಆಗಿದ್ದ ಕಸ್ತೂರಿ ಅವರಿಗೆ  ನಿನ್ನೆ ಸಂಜೆ ಮನೆಯಲ್ಲಿ ಹೊಟ್ಟೆ ನೋವು ಕಾಣಿಸಿಕೊಂಡಿದ್ದು ತಕ್ಷಣವೇ ಅವರನ್ನ ಸ್ಥಳೀಯರೇ ಆಟೋದಲ್ಲಿ ತುಮಕೂರು ಜಿಲ್ಲಾಸ್ಪತ್ರೆಗೆ ಕಳಿಸಿದ್ದಾರೆ.

ಈ ವೇಳೆ ತಾಯಿ ಕಾರ್ಡ್ ಇಲ್ಲ ಎಂದು ಚಿಕಿತ್ಸೆ ಕೊಡದೆ ಜಿಲ್ಲಾಸ್ಪತ್ರೆ ಸಿಬ್ಬಂದಿ ವಾಪಸ್‌ ಕಳುಹಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ವೈದ್ಯೆಯ ಬಳಿ ಅಂಗಲಾಚಿ ಕೇಳಿದರೂ  ಚಿಕಿತ್ಸೆ ನೀಡಿದೇ ವೈದ್ಯರು ನಿರ್ಲಕ್ಷ್ಯ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ನಾವು ಚಿಕಿತ್ಸೆ ಕೊಡಲ್ಲ.. ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಎಂದು ವೈದ್ಯರು ತಿಳಿಸಿದ್ದಾರೆ ಎನ್ನಲಾಗಿದೆ.

ಇನ್ನು, ಹಣವೂ ಇಲ್ಲದೆ  ಗರ್ಭಿಣಿ ಕಸ್ತೂರಿ ಮನೆಗೆ ವಾಪಸ್‌ ಬಂದಿದ್ದರು. ನಂತರ, ಗುರುವಾರ ಒಂದು ಮಗುವಿಗೆ ಜನ್ಮ ನೀಡಿದ್ದು,  ಬಳಿಕ, ಮತ್ತೊಂದು ಮಗುವಿಗೆ ಜನ್ಮ ನೀಡುವಾಗ ತೀವ್ರ ರಕ್ತಸ್ರಾವವಾಗಿ ಎರಡು ಮಕ್ಕಳು ಹಾಗೂ ತಾಯಿ ಸೇರಿ ಮೂವರುಸಾವನ್ನಪ್ಪಿದ್ದಾರೆ. .

ಗರ್ಭಿಣಿ ಹಾಗೂ ಇಬ್ಬರು ಮಕ್ಕಳ ಸಾವಿಗೆ ತುಮಕೂರು ಜಿಲ್ಲಾಸ್ಪತ್ರೆ ವೈದ್ಯರೇ ಕಾರಣ ಎಂದು ಸ್ಥಳೀಯರು ಆರೋಪ ಮಾಡಿದ್ದಾರೆ. ತುಮಕೂರಿನ ಎನ್‌ಇಪಿಎಸ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

Key words: hospital -doctor negligence-three-death-tumkur