ತಹಶೀಲ್ದಾರ್ ಗೆ ತರಾಟೆ: ಜೂನ್ ಅಂತ್ಯದೊಳಗೆ ಕೊಡಗು ನಿರಾಶ್ರಿತರಿಗೆ ಮನೆ ಹಸ್ತಾಂತರ- ಸಚಿವ ಆರ್.ವಿ ದೇಶಪಾಂಡೆ…

Promotion

ಕೊಡಗು,ಜೂ,19,2019(www.justkannada.in): ಜೂನ್ ಅಂತ್ಯದೊಳಗೆ ಕೊಡಗು ನಿರಾಶ್ರಿತರಿಗೆ ಮನೆ ಹಸ್ತಾಂತರ ಮಾಡಲಾಗುತ್ತದೆ ಎಂದು ಕಂದಾಯ ಸಚಿವ  ಆರ್ ವಿ ದೇಶಪಾಂಡೆ ತಿಳಿಸಿದರು.

ಕೊಡಗು ಜಿಲ್ಲೆ ಪ್ರವಾಹ ಪೀಡಿತ ಪ್ರದೇಶಗಳಿಗೆ  ಸಚಿವ ಆರ್.ವಿ ದೇಶಪಾಂಡೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬಳಿಕ ಮಾತನಾಡಿದ ಅವರು, ಮನೆಗಳ ನಿರ್ಮಾಣ ಬಹುತೇಕ ಪೂರ್ಣವಾಗಿದೆ. ಮೂಲಭೂತ ಸೌಕರ್ಯ ಬಾಕಿ ಇದೆ. ತ್ವರಿತವಾಗಿ ಕಾಮಗಾರಿ ಪೂರ್ಣಗೊಳಿಸಲು ಸೂಚಿಸಲಾಗಿದೆ. ಮನೆ ಮೂಲಭೂತ ಸೌಕರ್ಯ ಕಾಮಗಾರಿ ಪೂರ್ಣಗೊಂಡ ಮನೆಗಳು ಆಗಿಂದಾಗ್ಗೆ ಹಸ್ತಾಂತರ ಮಾಡಲಾಗುತ್ತದೆ ಎಂದು ತಿಳಿಸಿದರು.

ಕೊಡಗು ಜಿಲ್ಲಾಡಳಿತ ಪುನರ್ವಸತಿ ಕಾರ್ಯದಲ್ಲಿ ಉತ್ತಮವಾಗಿ ಕೆಲಸ ಮಾಡಿದೆ. ಕೆಲವು ಸಣ್ಣ ಪುಟ್ಟ ತೊಡಕುಗಳಿಂದ ಮನೆ ನಿರ್ಮಾಣ, ಹಸ್ತಾಂತರ ವಿಳಂಬವಾಗಿದೆ ಎಂದರು.

ವಿರಾಜಪೇಟೆ ತಹಶೀಲ್ದಾರ್ ಗೆ ತರಾಟೆ..

ಮಡಿಕೇರಿ‌ ಕೋಟೆ ಸಭಾಂಗಣದಲ್ಲಿ ನಡೆದ   ಪ್ರಗತಿ ಪರಿಶೀಲನಾ ಸಭೆಯಲ್ಲಿ ಸಚಿವ ಆರ್. ವಿ ದೇಶಪಾಂಡೆ ವಿರಾಜಪೇಟೆ ತಹಶೀಲ್ದಾರ್ ಗೋವಿಂದರಾಜುಗೆ ತರಾಟೆ ತೆಗೆದುಕೊಂಡ ಘಟನೆ ನಡೆಯಿತು. ಜನಸಾಮಾನ್ಯರ ಪರ ಕೆಲಸ ಮಾಡಿ. ಟ್ರಾನ್ಸ್ ಫರ್ ಆಗ್ಬೇಕಾ, ಸಸ್ಪೆಂಡ್ ಮಾಡ್ಬೇಕಾ ಎಂದ ಸಚಿವ ದೇಶಪಾಂಡೆ ಎಚ್ಚರಿಕೆ ನೀಡಿದರು.

ತಾಲ್ಲೂಕು ಸಾಮಾನ್ಯ ಸಭೆ ಗೈರಾಗಲು ಕಾರಣವೇನು? ನಿಮ್ಮ ಮೇಲೆ ಆನೇಕ ಆರೋಪ ಕೇಳಿ ಬಂದಿದೆ ಎಂದು ತಹಶೀಲ್ದಾರ್ ವಿರುದ್ದ ಕಿಡಿಕಾರಿದರು. ಈ ವೇಳೆ ಜಿಲ್ಲಾ ಉಸ್ತುವಾರಿ ಸಚಿವ ಸಾ.ರಾ.ಮಹೇಶ್  ಉಪಸ್ಥಿತರಿದ್ದರು.

Key words: Home- transfer – Kodagu refugees – end –June-Minister RV Deshpande.