ಕೊರೊನಾಗೆ ಮನೆಯೇ ಸೇಫ್ : ಮೈಸೂರಿನಲ್ಲಿ ಹೊಸ ಮಾದರಿ ಹುಟ್ಟು ಹಾಕಿದ ಹೋಂ ಐಸೋಲೇಸನ್ ಪ್ರಕರಣಗಳು‌…

Promotion

ಮೈಸೂರು,ಜು,21,2020(www.justkannada.in): ವಿಶ್ವವನ್ನೇ ತಲ್ಲಣಗೊಳಿಸಿರುವ ಮಹಾಮಾರಿ ಕೊರೋನಾ ದೇಶದಲ್ಲೂ ಅಟ್ಟಹಾಸ ಮೆರೆಯುತ್ತಿದೆ. ಈ ನಡುವೆ ಕೊರೋನಾ ಸೋಂಕಿಗೊಳಗಾದವರನ್ನ ಕೂಡಲೇ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡುವ ವ್ಯವಸ್ಥೆ ಇದೆ. ಆದರೆ ಮಹಾಮಾರಿ ಕೊರೋನಾಗೆ ಮನೆಯೇ ಸೇಫ್ ಎಂಬುದಕ್ಕೆ ಮೈಸೂರಿನಲ್ಲಿನ ಹೋಂ ಐಸೋಲೇಸನ್ ಪ್ರಕರಣಗಳ ಸಂಖ್ಯೆಯೇ ಸಾಕ್ಷಿಯಾಗಿದೆ.jk-logo-justkannada-logo

ಹೌದು ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಹೋಂ ಐಸೋಲೇಸನ್ ಪ್ರಕರಣಗಳು‌ ಹೊಸ ಮಾದರಿಯನ್ನೇ ಹುಟ್ಟು ಹಾಕಿದೆ, ಮೈಸೂರಿನ ಶೇ.40ರಷ್ಟು ಸೋಂಕಿತರಿಗೆ ಮನೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಸುಮಾರು 399 ಸೋಂಕಿತರು ಮನೆಯಲ್ಲೇ ಚಿಕಿತ್ಸೆ ಪಡೆಯುತ್ತಿದ್ದಾರೆ, ಹೀಗಾಗಿ ಮನೆಯಲ್ಲೇ ಕೊರೋನಾಗೆ ಚಿಕಿತ್ಸೆ ಪಡೆಯಲು ಆತಂಕದ ಅಗತ್ಯವಿಲ್ಲ ಎಂಬುದನ್ನ ಈ ಹೋಂ ಐಸೋಲೇಸನ್ ಪ್ರಕರಣಗಳೇ ತೋರಿಸುತ್ತಿವೆ.

ಹೀಗಾಗಿ ಮನೆಯಲ್ಲೇ ಚಿಕಿತ್ಸೆ ಪಡೆಯುವವರಿಗೆ ಮನೆಯವರೇ ಕೊರೊನಾ ವಾರಿಯರ್ಸ್ ಆಗಿರುತ್ತಾರೆ. ಕೊರೊನಾಗೆ ಮನೆಯೇ ಸೇಫ್ ಆಗಿದ್ದು, ಒಬ್ರು ಪಾಸಿಟಿವ್ ಇದ್ರೆ, ಅದೇ ಮನೆಯ ಮತ್ತೊಬ್ಬ ನೆಗೆಟಿವ್ ವ್ಯಕ್ತಿ ಅವರ ನೆರವಿಗೆ  ನಿಲ್ಲಬಹುದು. ಜತೆಗೆ ಮನೆಯತ್ತಿರದ ಮೆಡಿಕಲ್ ಸ್ಟೋರ್ ಗಳಲ್ಲೇ ಹೋಂ ಐಸೋಲೋಷನ್ ಕಿಟ್ ಸಿಗಲಿದೆ.

ಮೈಸೂರಿನಲ್ಲಿ ಹೋಂ ಐಸೋಲೇಸನ್ ಇರುವ ಸೋಂಕಿತರು  ಟೆಲಿ ಮೆಡಿಸಿನ್ ಮೂಲಕ ಚಿಕಿತ್ಸೆ ಪಡೆಯುತ್ತಿದ್ದಾರೆ. ಮೈಸೂರಿನ ಜಿಲ್ಲಾಧಿಕಾರಿಗಳ ಹೊಸ ಕಚೇರಿಯಲ್ಲಿ ನಿಯಂತ್ರಣ ಕೊಠಡಿಯಿಂದ ಚಿಕಿತ್ಸಾ ವಿಧಾನ ತಿಳಿಸಲಾಗುತ್ತಿದೆ. ಕೊರೊನಾ ತಡೆಗೆ ಏನ್ ಮಾಡ್ಬೇಕು, ಚಿಕಿತ್ಸೆ ಯಾವ ರೀತಿ ಪಡಿಬೇಕು ಎನ್ನುವ ಮಾಹಿತಿ ಲಭ್ಯವಾಗುತ್ತದೆ.

Key words: Home -Safe – Corona-treatment-Home Isolation- Cases – Mysore.