‘ಯೂಸ್ ಲೆಸ್ ಮಿನಿಸ್ಟರ್’ ಎಂದು ಟೀಕಿಸಿದ ಸಿದ್ಧರಾಮಯ್ಯಗೆ ಗೃಹ ಸಚಿವ ಅರಗ ಜ್ಞಾನೇಂದ್ರ ತಿರುಗೇಟು.

Promotion

ಬೆಂಗಳೂರು,ಜನವರಿ,24,2023(www.justkannada.in):  ‘ಯೂಸ್ ಲೆಸ್ ಮಿನಿಸ್ಟರ್’ ಎಂದು ತಮ್ಮನ್ನು ಟೀಕಿಸಿದ  ಮಾಜಿ ಸಿಎಂ ಸಿದ್ಧರಾಮಯ್ಯಗೆ ಗೃಹ ಸಚಿವ ಅರಗ ಜ್ಞಾನೇಂದ್ರ ತಿರುಗೇಟು ನೀಡಿದ್ದಾರೆ.

ಈ ಕುರಿತು ಮಾತನಾಡಿದ ಗೃಹ ಸಚಿವ ಅರಗ ಜ್ಞಾನೇಂದ್ರ,  ಈ ಮಾತುಗಳು ಸಿದ್ಧರಾಮಯ್ಯಗೆ ಶೋಭೆ ತರಲ್ಲ. ತಾವು ಮಾಜಿಸಿಎಂ ಅನ್ನೋದನ್ನ ಅರಿತು ಮಾತನಾಡಲಿ. ಸಿದ್ದರಾಮಯ್ಯರಿಂದ ಸರ್ಟಿಫಿಕೇಟ್ ಪಡೆಯುವ ಅಗತ್ಯವಿಲ್ಲ ಎಂದರು.

545 ಪಿಎಸ್ ಐ ನೇಮಕಾತಿ ಅಕ್ರಮ  ಕಿಂಗ್ ಪಿನ್  ರುದ್ರಗೌಡ ಹಿಂದೆ ಕಾಂಗ್ರೆಸ್ ನಲ್ಲಿದ್ದ. ರುದ್ರಗೌಡ ಪಾಟೀಲ್ ಹಿಂದೆ ಕಾಂಗ್ರೆಸ್ ನಿಂದ ಜಿಪಂಗೆ ಸ್ಪರ್ಧಿಸಿದ್ದ. ಈಗ ರುದ್ರಗೌಡ ಕಾಂಗ್ರೆಸ್ ಪಕ್ಷದ ಕಾರ್ಯಕರ್ತ ಅಲ್ಲ ಅಂತಾರೆ. ಭ್ರಷ್ಟಚಾರಿಗಳನ್ನ ಹುಟ್ಟಿ ಹಾಕಿದ್ದೇ ಕಾಂಗ್ರೆಸ್.  ಸ್ಯಾಂಟ್ರೋ ರವಿ ಬಿಜೆಪಿ ಸರ್ಕಾರದಿಂದ ಹುಟ್ಟಿಕೊಂಡವನಲ್ಲ ರವಿಯಂತಹ ಅನೇಕರನ್ನ ಸೃಷ್ಠಿಸಿದ್ದು ಕಾಂಗ್ರೆಸ್ ಮತ್ತು ಹೆಚ್ ಡಿಕೆ ಎಂದು ಅರಗ ಜ್ಞಾನೇಂದ್ರ ಕಿಡಿಕಾರಿದರು.

ಗಿಮಿಕ್ ಮಾಡಿ ಮತಪಡೆಯಲು ಪ್ರತಿಭಟನೆ ಮಾಡುತ್ತಿದ್ದಾರೆ. ಕಾಂಗ್ರೆಸ್ ನವರು ತಂತ್ರ ಯಶಸ್ವಿಯಾಗಲ್ಲ ಎಂದು ಅರಗ ಜ್ಞಾನೇಂದ್ರ ವಾಗ್ದಾಳಿ ನಡೆಸಿದರು.

Key words:  Home Minister -Araga Jnanendra – Siddaramaiah – criticized