ಇಂತಹ ಅಧಿಕಾರಿಗಳ ವರ್ತನೆ ನಿಜಕ್ಕೂ ಸಹಿಸಲ್ಲ: ಡಿ.ರೂಪಾ ಮತ್ತು ರೋಹಿಣಿ ಸಿಂಧೂರಿ ವಿರುದ್ಧ ಗೃಹ ಸಚಿವ ಅರಗ ಜ್ಞಾನೇಂದ್ರ ಅಸಮಾಧಾನ.

Promotion

ಬೆಂಗಳೂರು,ಫೆಬ್ರವರಿ,20,2023(www.justkannada.in):  ಐಪಿಎಸ್ ಅಧಿಕಾರಿ ಡಿ.ರೂಪಾ ಮತ್ತು ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ  ವರ್ತನೆಗೆ ಗೃಹ ಸಚಿವ ಅರಗ ಜ್ಞಾನೇಂದ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಇಬ್ಬರು ಮಹಿಳಾ ಅಧಿಕಾರಿಗಳ ಟಾಕ್ ವಾರ್ ಕುರಿತು ಪ್ರತಿಕ್ರಿಯಿಸಿದ ಗೃಹ ಸಚಿವ ಅರಗಜ್ಞಾನೇಂದ್ರ, ಜನರು ಐಎಎಸ್ ಐಪಿಎಸ್ ಅಧಿಕಾರಿಗಳನ್ನ ದೇವಮಾನವರು ಅಂದುಕೊಂಡಿದ್ದಾರೆ. ಈ ಇಬ್ಬರು ಅಧಿಕಾರಿಗಳು ಬಹಳ ಕೆಟ್ಟದಾಗಿ ವರ್ತನೆ ಮಾಡುತ್ತಿದ್ದಾರೆ.  ಈ ಇಬ್ಬರು ಅಧಿಕಾರಿಗಳ ನಡೆಯಿಂದ ನನಗೂ ತುಂಬಾ ನೋವಾಗಿದೆ ಇವರಿಂದ ಎಲ್ಲ ಅಧಿಕಾರಿಗಳಿಗೂ ಅಪಮಾನ ವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಈಗಾಗಲೇ ಡಿಜಿಪಿ ಸಿಎಸ್ ಜೊತೆಗೂ ನಾನು ಮಾತನಾಡಿದ್ದೇನೆ.  ಸಿಎಂ ಬೊಮ್ಮಾಯಿ ಕಾನೂನಿನ ಚೌಕಟ್ಟಿನಲ್ಲಿ ಕ್ರಮ ತೆಗೆದುಕೊಳ್ಳುತ್ತಾರೆ.  ಇಂತಹ ಅಧಿಕಾರಿಗಳ ವರ್ತನೆಯನ್ನ ನಿಜಕ್ಕೂ ಸಹಿಸಲು ಆಗಲ್ಲ. ವೈಯಕ್ತಿಕ ವಿಚಾರ  ಏನೇ ಇರಬಹುದು.  ಬೀದಿ ರಂಪಾಟ ಮಾಡುವುದು ಸರಿಯಲ್ಲ ಎಂದರು.

Key words:  Home Minister Araga Jnanendra-displeasure-against-D. Rup- Rohini Sindhuri