ಆರ್ ಎಸ್ ಎಸ್ ನವರದ್ದು ತಾಲಿಬಾನ್ ಸಂಸ್ಕೃತಿ ಎಂಬ ಸಿದ್ದರಾಮಯ್ಯ ಹೇಳಿಕೆಗೆ ಗೃಹ ಸಚಿವ ಅರಗ ಜ್ಞಾನೇಂದ್ರ ತಿರುಗೇಟು.

ಮೈಸೂರು,ಸೆಪ್ಟಂಬರ್,28,2021(www.justkannada.in): ಆರ್ ಎಸ್ ಎಸ್ ನವರದ್ದು ತಾಲಿಬಾನ್ ಸಂಸ್ಕೃತಿ ಎಂದು ಟೀಕಿಸಿದ್ದ ಮಾಜಿ ಸಿಎಂ ಸಿದ್ದರಾಮಯ್ಯಗೆ ಗೃಹ ಸಚಿವ ಅರಗ ಜ್ಞಾನೇಂದ್ರ ತಿರುಗೇಟು ನೀಡಿದ್ದಾರೆ.

ಮೈಸೂರಿನಲ್ಲಿ ಮಾತನಾಡಿದ ಸಚಿವ ಅರಗ ಜ್ಞಾನೇಂದ್ರ, ಸಿದ್ದರಾಮಯ್ಯರಂತ ಹಿರಿಯರು ಆಡಿದ ಮಾತಿಗೆ ನಾನು ಏನು ಹೇಳುವುದಿಲ್ಲ. ಸಿದ್ದರಾಮಯ್ಯ ಹೊಟ್ಟೆ ಕಿಚ್ಚು ಪಡಿಸುವಷ್ಟು ನಾವು ಕೆಲಸ ಮಾಡುತ್ತಿದ್ದೇವೆ ಎಂದು ಟಾಂಗ್ ನೀಡಿದರು.

ವಿರೋಧ ಪಕ್ಷದ ನಾಯಕರಾಗಿ ಹೇಳಬೇಕು ಅದಕ್ಕೆ ಹೇಳುತ್ತಿದ್ದಾರೆ. ತಾಲಿಬಾನ್‌ ಗೂ ಆರ್ ಎಸ್ ಎಸ್‌ಗೆ ವ್ಯತ್ಯಾಸ ಏನು.? ಎಲ್ಲರಿಗೂ ಗೊತ್ತಿದೆ ಹಿರಿಯರು ಇದನ್ನು ಅರ್ಥ ಮಾಡಿಕೊಳ್ಳಬೇಕು. ಇದು ಸಿದ್ದರಾಮಯ್ಯ ಅವರಿಗೂ ಗೊತ್ತಿದೆ. ಕೆಣಕಬೇಕು, ಚುಚ್ಚಬೇಕು, ಅಪಹಾಸ್ಯ ಮಾಡಬೇಕು ಅದಕ್ಕಾಗಿ ಹೇಳುತ್ತಿದ್ದಾರೆ. ಜನರು ದಡ್ಡರಲ್ಲ ಇದನ್ನು ಅರ್ಥ ಮಾಡಿಕೊಳ್ಳುತ್ತಾರೆ. ಆರ್ ಎಸ್ ಎಸ್ ದೇಶಕ್ಕಾಗಿ ಏನು ಕೆಲಸ ಮಾಡುತ್ತಿದೆ ಹೇಗೆ ಕೆಲಸ ಮಾಡುತ್ತಿದೆ ಗೊತ್ತಿದೆ. ಪ್ರಧಾನಿ ಉಪ ರಾಷ್ಟ್ರಪತಿ ರಾಜ್ಯದ ಗೃಹಮಂತ್ರಿ ಆರ್ ಎಸ್ ಎಸ್‌ನಿಂದ ಬಂದವರು. ಆರ್ ಎಸ್ ಎಸ್ ಒಳ್ಳೆಯದನ್ನು ಮಾಡು ಅನ್ನುತ್ತೇ. ದೇಶದ ಹಿತಕ್ಕಾಗಿ ಕೆಲಸ ಮಾಡಲು ಕಲಿಸುತ್ತದೆ. ದೇಶ ವೈಯಕ್ತಿಕ ವಿಚಾರ ಬಂದಾಗ ಬದುಕನ್ನು ಬಲಿ ಕೊಡು. ರಾಷ್ಟ್ರದ ಸಂರಕ್ಷಣೆ ಮಾಡು ಅಂತಾ ಹೇಳುತ್ತದೆ. ಈ ರೀತಿ ಹೇಳುವುದು ಆರ್ ಎಸ್ ಎಸ್ ಮಾತ್ರ. ಈಗಾಗಿ ನಾವು ಅದನ್ನು ಪ್ರೀತಿಸುತ್ತೇವೆ. ಈ ರೀತಿ ಸಿದ್ದರಾಮಯ್ಯ ಹೇಳಿದಷ್ಟು ಒಳ್ಳೆಯದು ಎಂದು ತಿರುಗೇಟು ನೀಡಿದರು.

ಬಿಜೆಪಿಯವರಿಗೆ ಮನುಷ್ಯತ್ವ ಇಲ್ಲ ಸಿದ್ದರಾಮಯ್ಯ ಹೇಳಿಕೆ  ಕುರಿತು ಪ್ರತಿಕ್ರಿಯಿಸಿದ ಅವರು, ಯಾರಿಗೆ ಮನುಷ್ಯತ್ವ ಇಲ್ಲ ಯಾರಿಗೆ ಮನುಷ್ಯತ್ವ ಇದೆ ಎಲ್ಲರಿಗೂ ಗೊತ್ತಿದೆ. ಸಿದ್ದರಾಮಯ್ಯ ಸಂಘಟನೆ ಎಲ್ಲಿದೆ ಅಂತಾ ಬ್ಯಾಟರಿ ಹಾಕಿ ಹುಡುಕಬೇಕಿದೆ ಎಂದು ಟಾಂಗ್ ನೀಡಿದರು.

Key words: Home Minister -Arag Jaganendra – Siddaramaiah-statement – RSS -Taliban culture.