ತುಂಬಾ ಅಗತ್ಯವಿದ್ರೆ ಮಾತ್ರ ಹೋಂ ಐಸೋಲೇಷನ್ ಗೆ ಅವಕಾಶ- ಮೈಸೂರು ಡಿಸಿ ಅಭಿರಾಂ ಜೀ ಶಂಕರ್  ಹೇಳಿಕೆ…

Promotion

ಮೈಸೂರು,ಜು,15,2020(www.justkannada.in): ಮೈಸೂರಿನಲ್ಲಿ  ಕೊರೋನಾ ಸೋಂಕಿತರು ಹೆಚ್ಚಾಗಿದ್ದು ಹೋಂ ಐಸೋಲೇಷನ್ ಪಡೆಯುವವರ ಸಂಖ್ಯೆ ಹೆಚ್ಚಾಳ ಹಿನ್ನಲೆ, ತುಂಬಾ ಅಗತ್ಯವಿದ್ರೆ ಮಾತ್ರ ಹೋಂ ಐಸೋಲೇಷನ್ ಅವಕಾಶ ನೀಡಲಾಗುತ್ತದೆ ಎಂದು ಮೈಸೂರು ಜಿಲ್ಲಾಧಿಕಾರಿ ಅಭಿರಾಂ ಜೀ ಶಂಕರ್ ತಿಳಿಸಿದ್ದಾರೆ.

ಮೈಸೂರಿನಲ್ಲಿ ಇಂದು ಮಾತನಾಡಿದ ಜಿಲ್ಲಾಧಿಕಾರಿ ಅಭಿರಾಂ ಜಿ ಶಂಕರ್, ಹೊಂ ಐಷುಲೇಷನ್ ಹೆಚ್ವು ಅವಕಾಶ ಕೊಟ್ರೆ ಸೋಂಕು ಹರುಡುವ ಸಾಧ್ಯತೆ ಇದೆ. ಸೋಂಕಿತರಿಗೆ ಕೋವಿಡ್  ಆಸ್ಪತ್ರೆಯಲ್ಲೆ ಚಿಕಿತ್ಸೆ ನೀಡಲಾಗುತ್ತೆ. ಕಳೆದ ಎರಡು ಮೂರು ದಿನಗಳಿಂದ ಹೋಂ ಐಸೋಲೇಷನ್ ಪಡೆಯುವವರ ಸಂಖ್ಯೆ 20 ರಷ್ಟಿತ್ತು.ಆದರೆ ನೆನ್ನೆ ಒಂದೇ ದಿನ ಶೇ. 50 ಕ್ಕೇರಿದೆ. ಜೊತೆಗೆ ಮೈಸೂರಿನಲ್ಲಿ ಡೆತ್ ರೇಟ್ ಸಹ ಹೆಚ್ಚಾಗ್ತಿದೆ. ಹೋಂ‌ ಐಸೋಲೇಷನ್ ಗೈಡ್ ಲೈನ್ಸ್ ನ್ನ ಚಾಚು ತಪ್ಪದೆ ಪಾಲಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಸೊಂಕೀತರಿಗೆ ಎಲ್ಲಾ ವ್ಯವಸ್ಥೆ ಸರಿ ಇದ್ದು ತೀರ ಅಗತ್ಯ ಇದ್ದರೆ ಮಾತ್ರ ಹೋಂ ಐಸೋಲೇಷನ್ ಗೆ ಅವಕಾಶ ನೀಡಲಾಗುತ್ತೆ ಎಂದು ತಿಳಿಸಿದರು.home-isolation-only-allowed-need-mysore-dc-abhiram-ji-shankar

ಎನ್ ಆರ್ ಕ್ಷೇತ್ರದಲ್ಲಿ ಹೆಲ್ತ್ ಕ್ಯಾಂಪ್ ಮಾಡುವುದು ಸದಸ್ಯಕ್ಕೆ ಕೈಬಿಡಲಾಗಿದೆ. ವೈದಕೀಯ ತಂಡದವರು ಮನೆ‌ಮನೆಗೆ ತೆರಳಿ ಶಂಕಿತರ ಸ್ವಾಬ್ ಕಲೆಕ್ಟ್ ಮಾಡಲಾಗುತ್ತೆ. ಸದ್ಯಕ್ಕೆ 2300 ಆಂಟಿಜೆನ್ ಕಿಟ್ ಇದೆ. ಅಲ್ಲಿ ಹೆಚ್ಚಿನ ಕಿಟ್ ಬೇಕಾಗುತ್ತೆ. ಇದನ್ನ ನಾವು ಸರ್ಕಾರದ ಗಮನಕ್ಕೆ ತಂದಿದ್ದೇವೆ. ಎನ್ ಆರ್ ಕ್ಷೇತ್ರದಲ್ಲಿ ಎಲ್ಲೆಲ್ಲಿ ಸೋಂಕಿನ ಪ್ರಮಾಣ ಹೆಚ್ಚಾಗಿದೆ ಎಂಬುದರ ಗಡಿ ಗುರುತಿಸಲಾಗಿದೆ. ಮೂರು ವೈದ್ಯಕೀಯ ತಂಡ ನಾಳೆಯಿಂದ ಕೆಲಸ ಮಾಡಲಿವೆ ಎಂದು ಡಿಸಿ ಅಭಿರಾಂ ಜೀ ಶಂಕರ್ ಮಾಹಿತಿ ನೀಡಿದರು.

Key words: Home isolation – only-allowed – need-Mysore DC- Abhiram Ji Shankar