ಮನೆ ಕುಸಿದು 7 ಮಂದಿ ಸಾವು ಪ್ರಕರಣ: ಮೃತರ ಕುಟುಂಬಸ್ಥರಿಗೆ ಪರಿಹಾರ ಚೆಕ್ ವಿತರಿಸಿದ ಸಚಿವ ಗೋವಿಂದ ಕಾರಜೋಳ.

Promotion

ಬೆಳಗಾವಿ,ಅಕ್ಟೋಬರ್,7,2021(www.justkannada.in):  ಬೆಳಗಾವಿ ಜಿಲ್ಲೆಯ ಬಡಾಲ ಅಂಕಲಗಿ ಗ್ರಾಮದಲ್ಲಿ ಮನೆಯ ಗೋಡೆ ಕುಸಿದು ಒಂದೇ ಕುಟುಂಬದ 7 ಮಂದಿ ಮೃತಪಟ್ಟವರ ಕುಟುಂಬಕ್ಕೆ ಸಚಿವ ಗೋವಿಂದ ಕಾರಜೋಳ ಪರಿಹಾರ ಚೆಕ್ ವಿತರಿಸಿದರು.

ಇಂದು ಬಡಾಲ ಅಂಕಲಗಿ ಗ್ರಾಮಕ್ಕೆ ಭೇಟಿ ನೀಡಿ ಸ್ಥಳ ಪರಿಶೀಲಿಸಿದ ಸಚಿವ ಗೋವಿಂದ ಕಾರಜೋಳ ನಂತರ ಮೃತರ ಕುಟುಂಬಕ್ಕೆ ಪರಿಹಾರದ ಚೆಕ್ ವಿತರಿಸಿದರು. ಬಳಿಕ ಮಾತನಾಡಿದ ಅವರು, ನಾವು ಪರಿಹಾರ ಕೊಡಬಹುದು ಆದರೆ ಜೀವ ತಂದುಕೊಡಲು ಆಗಲ್ಲ.  ಸತ್ತ ಮೇಲೆ ಪರಿಹಾರ ನೀಡುವುದು ದೊಡ್ಡದಲ್ಲ. ಸಾಯುವ ಮುನ್ನ ರಕ್ಷಣೆ ಮಾಡಬೇಕು ಎಂದರು.

ಮನೆ ಕುಸಿದು ಮೃತಪಟ್ಟವರಿಗೆ  ಸಿಎಂ ಬಸವರಾಜ ಬೊಮ್ಮಾಯಿ ಸಂತಾಪ ಸೂಚಿಸಿ ತಲಾ 5 ಲಕ್ಷ ಪರಿಹಾರ ಘೋಷಿಸಿದ್ದರು.

Key words: Home –collapse- 7 dead-Minister- Govinda Karajola- distributes – check