ಹಾಲಿವುಡ್‌ನ ದಂತಕಥೆ ನಟ ಕಿರ್ಕ್ ಡೌಗ್ಲಾಸ್ ನಿಧನ

Promotion

ವಾಷಿಂಗ್ಟನ್, ಫೆಬ್ರವರಿ 0, 2019 (www.justkannada.in): ಹಾಲಿವುಡ್‌ನ ದಂತಕಥೆ ನಟ ಕಿರ್ಕ್ ಡೌಗ್ಲಾಸ್ (103) ನಿಧನರಾಗಿದ್ದಾರೆ.

ಆಸ್ಕರ್ ಪ್ರಶಸ್ತಿ ವಿಜೇತ ನಟ ಮೈಕೆಲ್ ಡೌಗ್ಲಾಸ್ ಅವರ ತಂದೆಯೂ ಆಗಿರುವ, ಕಿರ್ಕ್ 6 ದಶಕಗಳ ಕಾಲ ಹಾಲಿವುಡ್ ನಲ್ಲಿ ತಮ್ಮ ಚಾಪು ಮೂಡಿಸಿದ್ದರು.

ಕಿರ್ಕ್ ಡೌಗ್ಲಾಸ್ ಇಂದು ನಮ್ಮನ್ನು ತೊರೆದಿದ್ದಾರೆ ಎಂದು ನನ್ನ ಸಹೋದರರು ಮತ್ತು ನಾನು ತೀವ್ರ ದುಃಖದಿಂದ ಪ್ರಕಟಿಸುತ್ತಿದ್ದೇವೆ’ ಎಂದು ಮೈಕೆಲ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.