ಲಾಕ್ ಡೌನ್ ಮುಂದುವರಿಕೆ ಬಗ್ಗೆ ಸುಳಿವು: ಗ್ರಾಮೀಣ ಭಾಗದಲ್ಲಿ ಸೋಂಕು ಕಡಿಮೆಯಾಗುತ್ತದೆ ಎಂದ ಸಚಿವ ಸುಧಾಕರ್…

ದಾವಣಗೆರೆ,ಮೇ,21,2021(www.justkannada.in): ಕೊರೋನಾ ಮಹಾಮಾರಿ 2ನೇ ಅಲೆ ನಗರ ಪ್ರದೇಶ ಗ್ರಾಮೀಣ ಪ್ರದೇಶದಲ್ಲೂ ಹೆಚ್ಚಾಗಿ ಹರಡುತ್ತಿರುವ ಹಿನ್ನೆಲೆ ಜಾರಿ ಮಾಡಲಾಗಿರುವ ಲಾಕ್ ಡೌನ್ ಅನ್ನು ಮುಂದುವರೆಸುವ ಬಗ್ಗೆ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಸುಳಿವು ನೀಡಿದ್ದಾರೆ.jk

ಈ ಬಗ್ಗೆ ದಾವಣಗೆರೆಯಲ್ಲಿ ಮಾತನಾಡಿರುವ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್, ಲಾಕ್ ಡೌನ್ ವಿಸ್ತರಣೆಗೆ ಬಹುತೇಕ ಸಚಿವರ ಅಭಿಪ್ರಾಯವಿದೆ. ಲಾಕ್ ಡೌನ್ ಬಗ್ಗೆ ಸಿಎಂಗೂ ಇದೇ ಅನಿಸಿಕೆ ಇದೆ. ಮೇ 23 ರಂದು ಸಭೆ ನಡೆಸಿ ಬಳಿಕ ಅಂತಿಮ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದು ತಿಳಿಸಿದರು.

ಗ್ರಾಮೀಣ ಭಾಗದಲ್ಲಿ ಕೊರೋನಾ ಸೋಂಕಿನ ಸಂಖ್ಯೆ ಕಡಿಮೆಯಾಗುತ್ತಿದೆ. ಗ್ರಾಮೀಣ ಪ್ರದೇಶದಲ್ಲಿ ಶೇ.47ರಷ್ಟು ಸೋಂಕಿನ ಪ್ರಮಾಣವಿತ್ತು. ಈಗ ಶೇ.27 ರಷ್ಟಕ್ಕೆ ಸೋಂಕಿನ ಪ್ರಮಾಣ ಇಳಿಕೆಯಾಗಿದೆ. ಲಸಿಕೆ ಹೆಚ್ಚು ಮಾಡಿದರೇ ಸೋಂಕು ಮತ್ತಷ್ಟು ಇಳಿಕೆಯಾಗುತ್ತದೆ ಎಂದು ಸಚಿವ ಸುಧಾಕರ್ ಮಾಹಿತಿ ನೀಡಿದರು.Hint - lockdown –corona-reduced -rural areas-  Minister -Sudhakar

ಇನ್ನು ರಾಜ್ಯದಲ್ಲಿ ರೆಮ್ ಡಿಸಿವಿರ್, ಆಕ್ಸಿಜನ್ ಕೊರತೆ ಇಲ್ಲ. ರೆಮ್ ಡಿಸಿವಿರ್ 10 ಲಕ್ಷ ವಯಲ್ಸ್ ರಾಜ್ಯಕ್ಕೆ ಬಂದಿದೆ. ಇದಕ್ಕೆ ಕೇಂದ್ರ ಸಚಿವ ಡಿವಿ ಸದಾನಂದಗೌಡರಿಗೆ ಧನ್ಯವಾದ ಹೇಳಬೇಕು ಎಂದು ಸಚಿವ ಸುಧಾಕರ್ ತಿಳಿಸಿದರು.

Key words: Hint – lockdown –corona-reduced -rural areas-  Minister -Sudhakar