ಹಿಮಾ ದಾಸ್ ಈಗ ಪೊಲೀಸ್ ಉಪ ಅಧೀಕ್ಷಕಿ: ತಾಯಿಯ ಕನಸು ಎಂದ ಧಿಂಗ್ ಎಕ್ಸ್’ಪ್ರೆಸ್

Promotion

ಬೆಂಗಳೂರು, ಫೆಬ್ರವರಿ 28, 2021 (www.justkannada.in): ತಾಯಿಯ ಕನಸು ನನಸು ಮಾಡಿದ್ದಾರೆ ಭಾರತ ಅಥ್ಲಿಟ್ ಹಿಮಾ ದಾಸ್.

ಹಿಮಾ ದಾಸ್ ಅವರನ್ನು ಅಸ್ಸಾಂ ಸರ್ಕಾರವು ಇತ್ತೀಚೆಗೆ ಪೊಲೀಸ್ ಉಪ ಅಧೀಕ್ಷಕಿಯನ್ನಾಗಿ ನೇಮಕ ಮಾಡಿದೆ.

ಅಸ್ಸಾಂ ಮುಖ್ಯಮಂತ್ರಿ ಸರ್ಬಾನಂದ​ ಸೊನೊವಾಲ್​ ಹಾಗೂ ಕೇಂದ್ರದಲ್ಲಿ ಕ್ರೀಡಾ ಸಚಿವರಾಗಿರುವ ಸರ್ಬಾನಂದ ಸೋನೊವಾಲ್ ನೇಮಕಾತಿ ಪತ್ರವನ್ನು ಇತ್ತೀಚಿಗೆ ಹಿಮಾ ಅವರಿಗೆ ಹಸ್ತಾಂತರಿಸಿದೆ.

ಪೊಲೀಸ್ ಉಪ ಅಧೀಕ್ಷಕಿಯಾಗಿ ನೇಮಕಗೊಂಡ ಹಿಮಾ ದಾಸ್ ಇದರಿಂದ ನನ್ನ ಬಾಲ್ಯದ ಕನಸು ನನಸಾಗಿದೆ ಎಂದು ಬಣ್ಣಿಸಿದ್ದಾರೆ. ಬಾಲ್ಯದಿಂದಲೂ ಪೊಲೀಸ್ ಅಧಿಕಾರಿಯಾಗಬೇಕೆಂಬ ಕನಸು ಕಾಣುತ್ತಿದ್ದೆ. ಅದೀಗ ಸಾಕಾರಗೊಂಡಿದೆ ಎಂದಿದ್ದಾರೆ.