ಹಿಜಾಬ್ ಧರಿಸಿಯೇ ವಿಧಾನಸೌಧದಲ್ಲಿ ಕೂರುತ್ತೇನೆ:  ಧೈರ್ಯವಿದ್ರೆ ತಡೆಯಲಿ- ‘ಕೈ’ ಶಾಸಕಿ

Promotion

ಕಲ್ಬುರ್ಗಿ,ಫೆಬ್ರವರಿ,5,2022(www.justkannada.in):  ಹಿಜಾಬ್ ವಿವಾದ ಖಂಡಿಸಿ ಕಲ್ಬುರ್ಗಿಯಲ್ಲಿ ಕಾಂಗ್ರೆಸ್ ಶಾಸಕಿ ಖನೀಜ್ ಪಾತೀಮಾ ನೇತೃತ್ವದಲ್ಲಿ ನೂರಾರು ವಿದ್ಯಾರ್ಥಿನೀಯರು ಪ್ರತಿಭಟನೆ ನಡೆಸಿದರು.

ಪ್ರತಿಭಟನೆಗೆ ಹಲವು ಕಾಂಗ್ರೆಸ್ ಮುಖಂಡರು ಬೆಂಬಲ ವ್ಯಕ್ತಪಡಿಸಿದ್ದರು. ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿದ ಕಲಬುರಗಿ ಉತ್ತರ ಕ್ಷೇತ್ರದ ಕಾಂಗ್ರೆಸ್ ಶಾಸಕಿ ಖನೀಜ್ ಪಾತೀಮಾ, ಹಿಜಾಬ್ ಧರಿಸಿಯೇ ವಿಧಾನಸೌಧದಲ್ಲಿ ಕೂರುತ್ತೇನೆ. ಧೈರ್ಯವಿದ್ರೆ ಯಾರಾದ್ರೂ ತಡೆಯಲಿ ಎಂದು ಸವಾಲು ಹಾಕಿದರು.

ರಾಜ್ಯದಲ್ಲಿ ಅಭಿವೃದ್ಧಿಯಾಗುತ್ತಿಲ್ಲ. ಅದಕ್ಕಾಗಿ ಈ ರೀತಿಯ ವಿಚಾರಗಳನ್ನು ಮುನ್ನಲೆಗೆ ತರಲಾಗುತ್ತಿದೆ. ನಾನು ಸಾಧ್ಯವಾದರೆ ಉಡುಪಿಗೆ ಹೋಗಿ ವಿದ್ಯಾರ್ಥಿಗಳಹೋರಾಟಕ್ಕೆ ಬೆಂಬಲ ನೀಡುತ್ತೇನೆ ಎಂದು ಹೇಳಿಕೆ ನೀಡಿದರು.

Key words: hijab-protest-kalburgi