ಹಿಜಾಬ್ ಕಾರಣದಿಂದ ಪರೀಕ್ಷೆ ಬಿಟ್ಟರೆ ಮತ್ತೆ ಅವಕಾಶ ಇಲ್ಲ- ಶಿಕ್ಷಣ ಸಚಿವ ಬಿಸಿ ನಾಗೇಶ್.

Promotion

ಬೆಂಗಳೂರು,ಫೆಬ್ರವರಿ,22,2022(www.justkannada.in): ಹಿಜಾಬ್ ಕಾರಣದಿಂದ ಪರೀಕ್ಷೆಯನ್ನ ಬಿಟ್ಟರೆ ಮತ್ತೆ ಅವಕಾಶ ಇಲ್ಲ ಪರೀಕ್ಷೆ ಬೇಕು ಎನ್ನುವವರು ಹಿಜಾಬ್ ತೆಗೆದು ಪರೀಕ್ಷೆ ಪಡೆಯಲಿ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿಸಿ ನಾಗೇಶ್ ತಿಳಿಸಿದ್ದಾರೆ.

ಇಂದು ಮಾಧ್ಯಮಗಳ ಜತೆ ಮಾತನಾಡಿದ ಸಚಿವ ಬಿಸಿ ನಾಗೇಶ್, ಹಿಜಾಬ್ ಬಗ್ಗೆ ಹೈಕೋರ್ಟ್ ಮಧ್ಯಂತರ ಆದೇಶ ನೀಡಿದೆ. ಆದರೆ  ಅದನ್ನ ವಿರೋಧಿಸಿದವರ ಪರ ಕಾಂಗ್ರೆಸ್ ನವರು ಮಾತನಾಡುತ್ತಿದ್ದಾರೆ.  ಹಿಜಾಬ್ ಕಾರಣದಿಂದ ಪರೀಕ್ಷಯನ್ನ ಬಿಟ್ಟರೆ ಮತ್ತೆ ಅವಕಾಶ  ನೀಡುವುದಿಲ್ಲ ಎಂದರು.

ಕಾಂಗ್ರೆಸ್ ನ ಹೇಳಿಕೆಗಳನ್ನ ಜನ ಗಮನಿಸುತ್ತಿದ್ದಾರೆ ಅನಗತ್ಯವಾಗಿ ರಾಷ್ಟ್ರಧ್ವಜದ ವಿವಾದ ಮಾಡುತ್ತಿದ್ದಾರೆ.  ಕಾಂಗ್ರೆಸ್ ನವರಿಂದ ನಾವು ರಾಷ್ಟ್ರಭಕ್ತಿ ಕಲಿತುಕೊಳ್ಳಬೇಕಿಲ್ಲ.  ಸಿದ್ದರಾಮಯ್ಯ ಸರ್ಕಾರದ  ಅವಧಿಯಲ್ಲಿ ರಾಷ್ಟ್ರ ವಿರೋಧಿಗಳ ಕೇಸ್ ವಾಪಸ್ ಪಡೆದಿದ್ದಾರೆ ಎಂದು ಕಿಡಿಕಾರಿದರು.

ಇನ್ನು ಶಿವಮೊಗ್ಗದಲ್ಲಿ ಶಾಲಾ-ಕಾಲೇಜು ಆರಂಭದ ಬಗ್ಗೆ ಅಲ್ಲಿನ ಜಿಲ್ಲಾಧಿಕಾರಿಗಳು ನಿರ್ಧಾರ ಮಾಡುತ್ತಾರೆ ಎಂದು ಬಿಸಿ ನಾಗೇಶ್ ತಿಳಿಸಿದರು.

Key words: hijab-no chance –again-Minister -BC Nagesh.