ಹಿಜಾಬ್ ತೀರ್ಪು ನೀಡಿದ್ಧ ಜಡ್ಜ್  ಗೆ ಬೆದರಿಕೆ : ಆರೋಪಿ ಬಂಧನ.

Promotion

ಚೆನ್ನೈ,ಮಾರ್ಚ್,20,2022(www.justkannada.in):  ಹಿಜಾಬ್ ತೀರ್ಪು ನೀಡಿದ್ಧ ನ್ಯಾಯಾಧೀಶರಿಗೆ ಬೆದರಿಕೆ ಹಾಕಿದ್ಧಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನ ಪೊಲೀಸರು ಬಂಧಿಸಿದ್ದಾರೆ ಎಂಬ ಮಾಹಿತಿ ತಿಳಿದು ಬಂದಿದೆ.

ತೌಹೀದ್ ಜಮಾತ್ ಸಂಘಟನೆಯ ರೆಹಮತ್ ಉಲ್ಲಾ ಎಂಬ ಆರೋಪಿಯನ್ನ ಬಂಧಿಸಿದ್ದಾರೆ. ರೆಹಮತ್ ಉಲ್ಲಾ ಮಧುರೈನಲ್ಲಿ ನಡೆದ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಹಿಜಾಬ್‌ ತೀರ್ಪಿಗೆ ಆಕ್ಷೇಪ ವ್ಯಕ್ತಪಡಿಸಿ ಪರೋಕ್ಷವಾಗಿ ನ್ಯಾಯಾಧೀಶರಿಗೆ ಕೊಲೆ ಬೆದರಿಕೆ ಹಾಕಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿತ್ತು.ganja peddlers arrested by mysore police

ಈ ಕುರಿತು ಪ್ರಕರಣ ದಾಖಲಾಗಿತ್ತು. ಇದೀಗ ತಲ್ಲಂಕೊಲ್ಲ ಪೊಲೀಸರು ರೆಹಮತ್ ಉಲ್ಲಾನನ್ನ ಬಂಧಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

Key words: Hijab-Judge-arrest – accused.