ಚುನಾವಣಾ ಅಕ್ರಮ ಪ್ರಕರಣ: ಶಾಸಕ ಸ್ಥಾನದಿಂದ ಬಿಸಿ ಗೌರಿಶಂಕರ್ ಅನರ್ಹಕ್ಕೆ ತಡೆ ನೀಡಿದ ಹೈಕೋರ್ಟ್.  

Promotion

ಬೆಂಗಳೂರು,ಮಾರ್ಚ್,30,2023(www.justkannada.in): ಮತದಾರರಿಗೆ ನಕಲಿಬಾಂಡ್  ಹಂಚಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಸಕ ಸ್ಥಾನದಿಂದ ಬಿಸಿ ಗೌರಿಶಂಕರ್ ಅನರ್ಹಕ್ಕೆ ಹೈಕೋರ್ಟ್ ವಿಭಾಗೀಯ ಪೀಠ ಒಂದು ತಿಂಗಳ ಕಾಲ ತಡೆ ನೀಡಿದೆ.

ತುಮಕೂರು ಗ್ರಾಮಾಂತರ  ಜೆಡಿಎಸ್ ಶಾಸಕ ಬಿಸಿ ಗೌರಿಶಂಕರ್ ಮೇಲೆ ಚುನಾವಣಾ ಅಕ್ರಮ ನಡೆಸಿದ ಆರೋಪವಿತ್ತು. ಈ ಸಂಬಂಧ ಹೈಕೋರ್ಟ್ ಕಲ್ಬುರ್ಗಿ ಪೀಠ  ಶಾಸಕ ಬಿಸಿ ಗೌರಿಶಂಕರ್ ಆಯ್ಕೆ ಅಸಿಂಧುಗೊಳಿಸಿ ಆದೇಶಿಸಿತ್ತು.  ನ್ಯಾ ಸುನೀಲ್ ದತ್ ಯಾದವ್ ಅವರಿದ್ದ ಏಕಸದಸ್ಯ ಪೀಠ ತೀರ್ಪು ನೀಡಿತ್ತು.

ಏಕಸದಸ್ಯಪೀಠ ಆದೇಶ ಪ್ರಶ್ನಿಸಿ ಶಾಸಕ ಗೌರಿಶಂಕರ್ ಮೇಲ್ಮನವಿ ಅರ್ಜಿಸಲ್ಲಿಸಿದ್ದರು. ಇದೀಗ ಶಾಸಕ ಸ್ಥಾನದಿಂದ ಗೌರಿಶಂಕರ್ ಅನರ್ಹಕ್ಕೆ ಹೈಕೋರ್ಟ್ ವಿಭಾಗೀಯ ಪೀಠ ಒಂದು ತಿಂಗಳು ತಡೆ ನೀಡಿದೆ ಎಂಬ ಮಾಹಿತಿ ಲಭ್ಯವಾಗಿದೆ.

Key words: High Court-stayed – disqualification – MLA- B.C. Gaurishankar