ಬೆಂಗಳೂರಿನಲ್ಲಿ ಮಹಾಮಳೆಗೆ ಜನವಸತಿ ಪ್ರದೇಶಗಳು ಜಲಾವೃತ: ಜನರು ಬದುಕು ತತ್ತರ.

Promotion

ಬೆಂಗಳೂರು,ಸೆಪ್ಟಂಬರ್,6,2022(www.justkannada.in):   ಭಾರಿ ಮಳೆಯಿಂದಾಗಿ ರಾಜ್ಯ ರಾಜಧಾನಿ ಬೆಂಗಳೂರಿನ ಜನವಸತಿ ಪ್ರದೇಶಗಳು ಜಲಾವೃತಗೊಂಡಿದ್ದು,  ರಸ್ತೆಗಳೆಲ್ಲ ಕೆರೆಯಂತಾಗಿ ವಾಹನ ಸಂಚಾರ ಅಸ್ತವ್ಯಸ್ತವಾಗಿದೆ.  ಅಕ್ಷರಶಃ ಬೆಂಗಳೂರಿನ ಜನತೆ ನಲುಗಿ ಹೋಗಿದ್ದಾರೆ.

ರಾಜ್ಯದಲ್ಲಿ 14 ವರ್ಷದ ಬಳಿಕ ದಾಖಲೆ ಪ್ರಮಾಣದ ಮಳೆ ಸುರಿದಿದೆ. ಬೆಂಗಳೂರಿನಲ್ಲಿ ಮನೆಗಳು, ಐಟಿ-ಬಿಟಿ ಕಂಪನಿಗಳು, ಅಪಾರ್ಟ್​ವೆುಂಟ್​ ಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಠಿಯಾಗಿದೆ. ನೀರು ಹರಿಯುವ ಮೂಲಗಳಾದ ಕೆರೆ, ಕಾಲುವೆಗಳನ್ನು ಒತ್ತುವರಿ ಮಾಡಿಕೊಂಡು ಮನೆ ಮತ್ತು ಬಡಾವಣೆಗಳನ್ನು ನಿರ್ವಿುಸಿಕೊಂಡ ಪರಿಣಾಮ ಪ್ರತಿ ಬಾರಿ ಮಳೆ ಬಂದಾಗಲೂ ನೀರು ಉಕ್ಕಿ ಹರಿದು ಪ್ರವಾಹ ಸೃಷ್ಟಿಯಾಗುತ್ತಿದೆ.

ಭಾರಿ ಮಳೆಯಿಂದಾಗಿ ಕೋಳಿ ಫಾರ್ಮ್ ಗೆ ನೀರು ನುಗ್ಗಿ 11 ಸಾವಿರ ಕೋಳಿಗಳು ಸಾವನ್ನಪ್ಪಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ತಾಲ್ಲೂಕಿನ ನಾರಾಯಣಪುರದಲ್ಲಿ ನಡೆದಿದೆ. ರಾಮಕೃಷ್ಣ ಎಂಬುವವರ ಕೋಳಿ ಫಾರ್ಮ್ ಗೆ ಕೆರೆ ನೀರು ನುಗ್ಗಿ ಈ ದುರಂತ ಸಂಭವಿಸಿದೆ.

ಇನ್ನು ಬೆಂಗಳೂರಿನಲ್ಲಿ  ಸೆಪ್ಟೆಂಬರ್ 9 ರವರೆಗೆ ಇದೇ ಪರಿಸ್ಥಿತಿ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ. ಈ ಹಿನ್ನೆಲೆಯಲ್ಲಿ ಬಹುತೇಕ ಶಾಲಾ – ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಕೊರೋನಾ ಅವಧಿಯಲ್ಲಿ ಇದ್ದಂತೆ ಆನ್ ಲೈನ್ ತರಗತಿಗಳನ್ನು ನಡೆಸಲಾಗುತ್ತಿದೆ. ಈಗಾಗಲೇ ಕಚೇರಿ ಆರಂಭಿಸಿದ್ದ ಕೆಲವೊಂದು ಐಟಿ ಕಂಪನಿಗಳೂ ಸಹ ತಮ್ಮ ಉದ್ಯೋಗಿಗಳಿಗೆ ಮನೆಯಿಂದಲೇ ಕಾರ್ಯ ನಿರ್ವಹಿಸಲು ಸೂಚಿಸಿವೆ ಎನ್ನಲಾಗಿದೆ.

Key words: heavy rains – Bengaluru- Residential- areas – flooded

ENGLISH SUMMARY…

Heavy rain leaves several residential areas in Bengaluru inundated
Bengaluru, September 6, 2022 (www.justkannada.in): Several areas of Bengaluru are inundated, as rain pounded the capital city. Many roads wore the look of lakes resulting in havoc and leaving the citizens helpless.
It is said that Bengaluru has witnessed heaviest rains in the last 14 years. Several houses, IT-BT company office buildings, apartments are inundated in rain water, creating havoc among the people. The situation is said to have arised due to the encroachment of lakes, tanks and converting them into residential localities. As a result of this, the same situation continues during every rainy season.
About 11,000 chicken have died due to the gushing of rain water into a chicken farm in Narayanapura, in Devanahalli Taluk. The farm belongs to Ramakrishna.
According to the Meterological Department, rains will continue to pound Bengaluru till September 9. Several schools and colleges have declared a holiday and have returned to online classes. Several IT companies which had recommenced working offline also reverted and instructed its employees to work from home again.
Keywords: Rain/ Bengaluru/pounded/ September 9