ರಾಮನಗರ ಜಿಲ್ಲೆಯಲ್ಲಿ ಮಳೆಯಿಂದ ಅಪಾರ ಪ್ರಮಾಣದ ಬೆಳೆ ಹಾನಿ:  ಇಬ್ಬರು ಸಾವು- ಸಿಎಂ ಬಸವರಾಜ ಬೊಮ್ಮಾಯಿ.

ರಾಮನಗರ,ಆಗಸ್ಟ್,29,2022(www.justkannada.in):  ರಾಮನಗರ ಜಿಲ್ಲೆಯಲ್ಲಿ ಮಳೆಯಿಂದಾಗಿ ಅಪಾರ ಪ್ರಮಾಣದಲ್ಲಿ ಬೆಳೆ ಹಾನಿಯಾಗಿದೆ. ಸಾಕಷ್ಟು ನಷ್ಟ ಉಂಟಾಗಿದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದರು.

ರಾಮನಗರದ ನೆರೆ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲಿಸಿದ ಬಳಿಕ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ,  ಮಳೆಯಿಂದಾಗಿ ಜಿಲ್ಲೆಯಲ್ಲಿ 600 ಎಕೆರೆ ಕೃಷಿ ಬೆಳೆ 500 ಎಕರೆ ತೋಟಗಾರಿಕೆ ಬೆಳೆ ನಾಶವಾಗಿದೆ. 153 ಮನೆಗಳಿಗೆ ಹಾನಿಯಾಗಿದ್ದು, 3,830 ಮನೆಗಳಿಗೆ ನೀರು ನುಗ್ಗಿ ಸಮಸ್ಯೆಯಾಗಿದೆ. ಬೆಂಗಳೂರು –ಮೈಸೂರು ಹೆದ‍್ಧಾರಿಯಲ್ಲಿ ನೀರು ನಿಂತಿದ್ದು, ಪರ್ಯಾಯ ಮಾರ್ಗ ಕಲ್ಪಿಸುವಂತೆ ರಾಮನಗರ,ಮಂಡ್ಯ, ಮೈಸೂರು ಡಿಸಿಗಳಿಗೆ ಸೂಚನೆ ನೀಡಿರುವೆ ಎಂದರು.

ಹಾಗೆಉಏ ಮಳೆಯಿಂದಾಗಿ ಇಬ್ಬರು ಮೃತಪಟ್ಟಿದ್ದಾರೆ ಚನ್ನಪಟ್ಟಣದಲ್ಲಿ ಒಬ್ಬರು ರಾಮನಗರದಲ್ಲಿ ಒಬ್ಬರು ಸಾವನ್ನಪ್ಪಿದ್ದಾರೆ . ಮಳೆಯಿಂದ 459 ಕುರಿ ಹಾಗೂ ಮೇಕೆ 16 ಹಸು ಮೃತಪಟ್ಟರೇ ಸುಮಾರು 5 ಸಾವಿರಕೋಳಿಗಳು ಸಾವನ್ನಪ್ಪಿವೆ.   ರಾಮನಗರ ಚನ್ನಪಟ್ಟಣದಲ್ಲಿ ಹೆಚ್ಚು ಮಳೆಯಾಗಿದೆ.  ರಸ್ತೆ ಕಾಮಗಾರಿಯಿಂದ ಈ ರೀತಿ  ಪರಿಸ್ಥಿತಿ ನಿರ್ಮಾಣವಾಗಿದೆ. ಪರಿಹಾರ ಕಾರ್ಯಕ್ಕೆ ಡಿಸಿಗೆ ಸೂಚಿಸಿದ್ದೇನೆ ಎಂದು ಸಿಎಂ ಬೊಮ್ಮಾಯಿ ಮಾಹಿತಿ ನೀಡಿದರು.

Key words:  Heavy -crop -damage – rain -Ramnagar district- CM -Basavaraja Bommai.