ನಾನು ಆರೋಗ್ಯವಾಗಿದ್ದೇನೆ: ಶೀಘ್ರವೇ ಪಕ್ಷದ ಕಚೇರಿಗೆ ಭೇಟಿ ನೀಡುತ್ತೇನೆ- ಕಾರ್ಯಕರ್ತರಿಗೆ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರ ಸಂದೇಶ.

Siddaramaiah- should go - national politics-former PM-HD Deve Gowda
Promotion

ಬೆಂಗಳೂರು,ಸೆಪ್ಟಂಬರ್,22,2022(www.justkannada.in): ನಾನು ಆರೋಗ್ಯವಾಗಿದ್ದೇನೆ.  ಶೀಘ್ರವೇ ಪಕ್ಷದ ಕಚೇರಿಗೆ ಭೇಟಿ ನೀಡುತ್ತೇನೆ. ನೀವು ಭೇಟಿಗೆ ಬರುವುದು ಬೇಡ ಎಂದು ಜೆಡಿಎಸ್ ಮುಖಂಡರು ಮತ್ತು ಕಾರ್ಯಕರ್ತರಿಗೆ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರು ಸಂದೇಶ ನೀಡಿದರು.

ಈ ಕುರಿತು ಮಾತನಾಡಿರುವ ಹೆಚ್.ಡಿ ದೇವೇಗೌಡರು, ನನಗೆ ಸ್ವಲ್ಪ ಪ್ರಮಾಣಲ್ಲಿ ಅನಾರೋಗ್ಯ  ಉಂಟಾಗಿತ್ತು. ವೈದ್ಯರು ವಿಶ್ರಾಂತಿಗೆ ಸೂಚನೆ ನೀಡಿದ್ದರು. ಹೀಗಾಗಿ ಕೆಕಕಾಲ ಮನೆಯಲ್ಲಿ ವಿಶ್ರಾಂತಿ ಪಡೆದಿದ್ದೇನೆ. ಇನ್ನೂ ಸ್ವಲ್ಪ ದಿನ ವಿಶ್ರಾಂತಿ ಪಡೆಯುತ್ತೇನೆ.  ಹೀಗಾಗಿ ಕೆಲ ದಿನದ ಮಟ್ಟಿಗೆ ನನ್ನ ಭೇಟಿಗೆ ಬರುವುದು ಬೇಡ. ನಂತರ ನಾನೇ ಕಚೇರಿಗೆ ಬರುತ್ತೇನೆ. ಎಲ್ಲಾ ಕಾರ್ಯಕ್ರಮಗಳಲ್ಲಿ ಭಾಗಿಯಾಗುತ್ತೇನೆ ಎಂದು ತಿಳಿಸಿದ್ದಾರೆ.Siddaramaiah- should go - national politics-former PM-HD Deve Gowda

ಮನೆಗೆ ಬಂದು ತಮ್ಮ ಆರೋಗ್ಯ ವಿಚಾರಿಸಿದ  ಮಾಜಿ ಸಿಎಂಗಳಾ ಸಿದ್ದರಾಮಯ್ಯ,  ಬಿಎಸ್ ಯಡಿಯೂರಪ್ಪ,  ಸಿಎಂ ಬಸವರಾಜ ಬೊಮ್ಮಾಯಿ, ಸಚಿವ ಆರ್.ಅಶೋಕ್ ಅವರಿಗೆ ಧನ್ಯವಾದ ಅರ್ಪಿಸಿದರು.

Key words:  healthy- Former PM- HD Deve Gowda- message – activists.