ಸುಧಾಕರ್ ಮತ್ತು ನನ್ನ ಮಧ್ಯೆ ಅಸಮಾಧಾನಿಲ್ಲ: ಕೊರೋನಾ ಬಗ್ಗೆ ಜನರಲ್ಲಿ ಭಯಬೇಡ ಎಂದ ಆರೋಗ್ಯ ಸಚಿವ ಶ್ರೀರಾಮುಲು….

Promotion

ಬೆಂಗಳೂರು,ಮಾ,16,2020(www.justkannada.in):  ಕೊರೋನಾ ವೈರಸ್ ಸೋಂಕು ಹರಡುವ ಭೀತಿ ಹಿನ್ನೆಲೆ, ರಾಜ್ಯದ ಜನರು ಆತಂಕ ಪಡುವ ಅಗತ್ಯವಿಲ್ಲ. ರಾಜ್ಯ ಸರ್ಕಾರ ಅಗತ್ಯ ಮುಂಜಾಗ್ರತಾ ಕ್ರಮಗಳನ್ನ ಕೈಗೊಂಡಿದೆ ಎಂದು ಆರೋಗ್ಯ ಸಚಿವ ಶ್ರೀರಾಮುಲು ತಿಳಿಸಿದರು.

ಬೆಂಗಳೂರಿನಲ್ಲಿ ಇಂದು ಮಾತನಾಡಿದ ಸಚಿವ ಶ್ರೀರಾಮುಲು, ಕಲ್ಬುರ್ಗಿ ಜಿಲ್ಲಾಸ್ಪರ್ತೆಗೆ ನಿನ್ನೆ ಭೇಟಿ ನೀಡಿದ್ದೇನೆ. ಅಗತ್ಯ ಮುಂಜಾಗ್ರತಾ ಕ್ರಮ ಕೈಗೊಳ್ಳಲು ವೈದ್ಯರಿಗೆ ಸೂಚಿಸಿದ್ದೇನೆ.  ಮೃತ ವೃದ್ಧನ ಕುಟುಂಬದವರಿಗೆ ತಪಾಸಣೆ ಮಾಡಲಾಗಿದೆ. ಓರ್ವರಿಗೆ ಕೊರೋನಾ ಸೋಂಕು ಇದೆ. ಸೋಂಕಿತನಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ . ಹೀಗಾಗಿ ಜನರು ಭಯಪಡುವ ಅಗತ್ಯವಿಲ್ಲ ಎಂದರು.

ಹಾಗೆಯೇ ತಮ್ಮ ಮತ್ತು ಸಚಿವ ಸುಧಾಕರ್ ನಡುವೆ ಅಸಮಾಧಾನ ಕುರಿತು ಪ್ರತಿಕ್ರಿಯಿಸಿದ ಸಚಿವ ಶ್ರೀರಾಮುಲು, ನನ್ನ ಮತ್ತು ಸುಧಾಕರ್ ಮಧ್ಯೆ ಯಾವುದೇ ಅಸಮಾಧಾನವಿಲ್ಲ. ಇಬ್ಬರು ಒಟ್ಟಾಗಿ ಕೆಲಸ ಮಾಡುತ್ತೇವೆ ಎಂದು ಸ್ಪಷ್ಟನೆ ನೀಡಿದರು.

Key words: Health Minister- Sriramulu – people- should not – afraid -corona.