ರೈಲುಗಳಲ್ಲಿ ಕಳ್ಳತನ ಮಾಡುತ್ತಿದ್ದ ಹೆಡ್​ ಕಾನ್ಸ್​ ಟೇಬಲ್  ಅರೆಸ್ಟ್.

Promotion

ಬೆಂಗಳೂರು,ನವೆಂಬರ್,6,2023(www.justkannada.in):  ರೈಲುಗಳಲ್ಲಿ ಕಳ್ಳತನ ಮಾಡುತ್ತಿದ್ದ ಹೆಡ್​ ಕಾನ್ಸ್​ಟೇಬಲ್​ನನ್ನು ಬೆಂಗಳೂರಿನ ಬೈಯ್ಯಪ್ಪನಹಳ್ಳಿ ರೈಲ್ವೆ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಚಿಕ್ಕಬಳ್ಳಾಪುರ ರೈಲ್ವೆ ಹೊರ ಠಾಣೆ ಹೆಡ್​ ಕಾನ್ಸ್​ ಟೇಬಲ್  ಸಿದ್ದರಾಮರೆಡ್ಡಿ  ಬಂಧಿತ ಆರೋಪಿ. ಬೆಳಗ್ಗೆ ಪೊಲೀಸ್ ಡ್ಯೂಟಿ, ರಾತ್ರಿ ಕಳ್ಳತನ ಮಾಡ್ತಿದ್ದ ಸಿದ್ದರಾಮರೆಡ್ಡಿ ಅವರು ಕೇರಳ, ತಮಿಳುನಾಡು ಪ್ರಯಾಣಿಕರನ್ನೇ ಟಾರ್ಗೆಟ್ ಮಾಡಿ ಕಳ್ಳತನ ಮಾಡುತ್ತಿದ್ದರು ಎನ್ನಲಾಗಿದೆ.

ಸಾಬಣ್ಣ ಎಂಬ ಎಂ.ಓ.ಬಿ. ಅಪರಾಧಿಯೊಬ್ಬನನ್ನು ಸಿದ್ದರಾಮರೆಡ್ಡಿ ಕಳ್ಳತನ ಮಾಡಲು ಜೊತೆಯಾಗಿ ಇಟ್ಟುಕೊಂಡಿದ್ದರು ಎನ್ನಲಾಗಿದೆ.  ಕೇರಳ ಮತ್ತು ತಮಿಳುನಾಡು ರಾಜ್ಯಗಳ ಪ್ರಯಾಣಿಕರೇ ಈತನ ಟಾರ್ಗೆಟ್. ನಗದು ಹಣ ಮತ್ತು ಚಿನ್ನಾಭರಣಗಳನ್ನ ಮಾತ್ರ  ಕಳ್ಳತನ ಮಾಡುತ್ತಿತ್ತು. ಆರೋಪಿ ಸಿದ್ದರಾಮರೆಡ್ಡಿಯನ್ನು ಇಲಾಖೆ ಸೇವೆಯಿಂದ ಅಮಾನತು ಮಾಡಿ, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Key words: Head constable- arrested -stealing -trains.