ಕರ್ನಾಟಕದ ಕೈ ನಾಯಕರಿಗೂ ತಕ್ಕ ಪಾಠ ಕಲಿಸಿದ ಪಂಚರಾಜ್ಯ ಚುನಾವಣೆ ಫಲಿತಾಂಶ: ಎಚ್ಡಿಕೆ

Promotion

ಬೆಂಗಳೂರು, ಮಾರ್ಚ್ 10, 2022 (www.justkannada.in): ಕರ್ನಾಟಕದಲ್ಲಿ ಜೆಡಿಎಸ್​ ನಾಶ ಮಾಡ್ತೀವಿ ಎಂದು ಹೊರಟ ಕಾಂಗ್ರೆಸ್ಸಿಗರಿಗೆ ಪಂಚರಾಜ್ಯ ಚುನಾವಣೆ ಫಲಿತಾಂಶ ತಕ್ಕ ಉತ್ತರ ಕೊಟ್ಟಿದೆ ಎಂದು ಮಾಜಿ ಸಿಎಂ ಎಚ್ಡಿಕೆ ಟೀಕಿಸಿದ್ದಾರೆ.

ಭಾರಿ ಕುತೂಹಲ ಮೂಡಿಸಿದ್ದ ಪಂಚರಾಜ್ಯ ಚುನಾವಣಾಯ ಫಲಿತಾಂಶ ಕುರಿತು ಬಹುತೇಕ ಸ್ಪಷ್ಟ ಚಿತ್ರಣ ಸಿಕ್ಕಿದ್ದು, ಕಾಂಗ್ರೆಸ್​ಗೆ ಹೀನಾಯ ಸೋಲಾಗಿದೆ. ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿರುವ ಎಚ್ಡಿಕೆ, ರಾಜ್ಯ ಕಾಂಗ್ರೆಸ್ ನಾಯಕರ ವಿರುದ್ಧ ಟೀಕಾ ಪ್ರಹಾರ ನಡೆಸಿದ್ದಾರೆ.

ಪಶ್ಚಿಮ ಬಂಗಾಳ ಮತ್ತು ಪಂಜಾಬ್​ ಚುನಾವಣೆ ಫಲಿತಾಂಶವೇ ನಮಗೆ ಸ್ಫೂರ್ತಿ. ಗೋವಾ, ಉತ್ತರಾಖಂಡ್​ನಲ್ಲಿ ಕಾಂಗ್ರೆಸ್ ಅನ್ನು ಗೆಲ್ಲಿಸಲು ಅಲ್ಲಿ ಯಾರೂ ನಾಯಕರಿಲ್ಲ ಎಂಬಂತೆ ಕರ್ನಾಟಕದ ಸೂತ್ರಧಾರಿಗಳನ್ನು ಕರೆಸಿಕೊಳ್ಳಲಿಲ್ಲವೇ? ಈಗ ಏನಾಯ್ತು ನೋಡಿ? ಎಂದು ಡಿಕಿಶಿ ವಿರುದ್ಧ ಎಚ್​ಡಿಕೆ ಪರೋಕ್ಷ ವಾಗ್ದಾಳಿ ನಡೆಸಿದ್ದಾರೆ.