ಮಾಧ್ಯಮಗಳಿಗೆ ಮಂಗಳಾರತಿ ಮಾಡಿದ ರಾಜವಂಶಸ್ಥ ಯದುವೀರ್……!

Promotion

 

ಮೈಸೂರು, ಜೂ.15, 2019 : (www.justkannada.in news) ನಗರದ ಪಾರಂಪರಿಕ ಕಟ್ಟಡ, ದೇವರಾಜ ಮಾರುಕಟ್ಟೆ ಕೆಡಗುವ ವಿಚಾರಕ್ಕೆ ಸಂಬಂಧಿಸಿದಂತೆ ಮಾಧ್ಯಮಗಳು, ಕೋರ್ಟ್ ಆದೇಶವನ್ನು ಸರಿಯಾಗಿ ಅರ್ಥ ಮಾಡಿಕೊಳ್ಳದೆ ತಪ್ಪಾಗಿ ಅರ್ಥೈಸಿಕೊಂಡಿವೆ ಎಂದು ರಾಜವಂಶಸ್ಥ ಯುದುವೀರ್ ಅಭಿಪ್ರಾಯಪಟ್ಟಿದ್ದಾರೆ.

ಕೆಲದಿನಗಳ ಹಿಂದೆಯಷ್ಟೆ ಕೆಲ ಮಾಧ್ಯಮಗಳಲ್ಲಿ ‘ ದೇವರಾಜ ಮಾರುಕಟ್ಟೆ ಕೆಡವಲು ಕೋರ್ಟ್ ಅದೇಶ ‘ ಎಂಬರ್ಥದ ತಲೆ ಬರಹದಡಿ ತಲೆ ಬುಡವಿಲ್ಲದ ಸುದ್ದಿ ಪ್ರಕಟಿಸಿದ್ದವು. ಈ ಫೇಕ್ ನ್ಯೂಸ್ ಗೆ ಸಂಬಂಧಿಸಿದಂತೆ ಖುದ್ದು ಯಧುವೀರ್ ಅವರೇ ಫೇಸ್ ಬುಕ್ ಮೂಲಕ ಸ್ಪಷ್ಟನೆ ನೀಡಿದ್ದಾರೆ.
ಕೋರ್ಟ್ ಆದೇಶವನ್ನು ಸರಿಯಾಗಿ ಅರ್ಥ ಮಾಡಿಕೊಳ್ಳದೆ ಮಾಧ್ಯಮಗಳು ವರದಿ ಪ್ರಕಟಿಸಿವೆ ಎಂದಿರುವ ರಾಜವಂಶಸ್ಥ ಯದುವೀರ್, ಆ ಮೂಲಕ ಗೊಂದಲಗಳಿಗೆ ತೆರೆ ಎಳೆಯುವ ಪ್ರಯತ್ನ ಮಾಡಿದ್ದಾರೆ. ಒಟ್ಟಾರೆ ಯದುವೀರ್ ಸ್ಪಷ್ಟನೆ ಹೀಗಿದೆ…….

HC orders demolition of Mysuru Devaraja Market is an falls news, yaduveer clarifies in facebook statement

ನ್ಯಾಯಾಲಯದ ಆದೇಶವನ್ನ ತಪ್ಪಾಗಿ ಅರ್ಧೈಸಲಾಗಿದೆ. ಹೈಕೋರ್ಟ್ ದೇವರಾಜ ಮಾರುಕಟ್ಟೆಯನ್ನ ಕೆಡವಲು ಆದೇಶಿಸಿಲ್ಲ. ಬದಲಿಗೆ ಅದರ ಸಂರಕ್ಷಣೆ ಮಾಡಲು ಚಿಂತನೆ ಮಾಡಿ ಎಂದು ಹೇಳಿದೆ. ಕೋರ್ಟ್ ಆದೇಶವನ್ನ ತಪ್ಪಾಗಿ ಅರ್ಥೈಸಲಾಗಿದೆ.
ನಾನು ದೇವರಾಜ ಮಾರುಕಟ್ಟೆ ಹಾಗೂ ಲ್ಯಾಂಡ್ಸ್‌ಡೌನ್ ಕಟ್ಟಡಗಳಿಗೆ ಭೇಟಿ ನೀಡಿದ್ದೇನೆ. ಅವುಗಳನ್ನ ಸಂರಕ್ಷಣೆ ಮಾಡಬಹುದು ಎಂದು ತಜ್ಞರು ತಿಳಿಸಿದ್ದಾರೆ. ಎಲ್ಲರು ಪಾರಂಪರಿಕ ಕಟ್ಟಡಗಳನ್ನ ಉಳಿಸಲು ಪ್ರಯತ್ನಿಸೋಣ ಎಂದು ಕರೆ‌ ನೀಡಿದ್ದಾರೆ.

 

key words : mysore-yaduveer-devaraja-market-demolition

 

HC orders demolition of Mysuru Devaraja Market is an falls news, yaduveer clarifies in facebook statement