ಮೈಸೂರಿನ ಶಾಂತಲ ಚಿತ್ರಮಂದಿರದಲ್ಲಿ ಶನಿವಾರ ‘ ರುಸ್ತುಂ-ಜೋಡಿ ‘

Promotion

 

ಮೈಸೂರು, ಜೂ.29, 2019 : (www.justkannada.in news) : ಹ್ಯಾಟ್ರಿಕ್ ಹೀರೊ ಶಿವರಾಜ್ ಕುಮಾರ್ ಶನಿವಾರ ಮೈಸೂರಿನಲ್ಲಿ ದಂಪತಿ ಸಮೇತ ‘ ರುಸ್ತುಂ’ ಸಿನಿಮಾ ವೀಕ್ಷಿಸಿದರು.
ನಿನ್ನೆಯಷ್ಟೆ ಶಿವಣ್ಣ ಅಭಿನಯದ ರುಸ್ತುಂ ಸಿನಿಮಾ ರಾಜ್ಯಾದ್ಯಂತ ಬಿಡುಗಡೆಗೊಂಡಿದ್ದು, ಪಾಸಿಟಿವ್ ಒಪಿನಿಯನ್ ವ್ಯಕ್ತವಾಗುತ್ತಿದೆ. ಇದು ಶಿವಣ್ಣ ಅವರ ಸಂತಸಕ್ಕೂ ಕಾರಣವಾಗಿತ್ತು. ಮೈಸೂರಿನ ‘ಶಕ್ತಿಧಾಮ’ದಲ್ಲಿನ ಕಾರ್ಯಕ್ರಮ ಒಂದರಲ್ಲಿ ಭಾಗವಹಿಸುವ ಸಲುವಾಗಿ ನಗರಕ್ಕೆ ಆಗಮಿಸಿರುವ ಶಿವಣ್ಣ ದಂಪತಿ, ಬಳಿಕ ಸಂಜೆ 4 ಗಂಟೆಗೆ ಶಾಂತಲ ಚಿತ್ರಮಂದಿರದಲ್ಲಿ ಸಿನಿಮಾ ವೀಕ್ಷಣೆಗೆಂದು ಆಗಮಿಸಿದ್ದರು.
ಸೆಂಚುರಿ ಸ್ಟಾರ್ ಸಿನಿಮಾ ವೀಕ್ಷಣೆಗೆಂದೆ ಶಾಂತಲ ಚಿತ್ರಮಂದಿರದಲ್ಲಿ ವಿಶೇಷ ವ್ಯವಸ್ಥೆ ಕಲ್ಪಿಸಲಾಗಿತ್ತು. ಅಲ್ಲಿ ಶಿವಣ್ಣ, ಮಡದಿ ಗೀತಾ ಹಾಗೂ ಆಪ್ತರ ಜತೆ ಸಿನಿಮಾ ನೋಡಿದರು.
ಇದಕ್ಕೂ ಮುನ್ನ ಮಾಧ್ಯಮದವರ ಜತೆ ಮಾತನಾಡಿದ ಶಿವರಾಜ್ ಕುಮಾರ್, ರುಸ್ತುಂ ಸಿನಿಮಾಕ್ಕೆ ಪ್ರೇಕ್ಷಕರ ಪ್ರತಿಕ್ರಿಯೆ ಕಂಡು ಸಂತಸವಾಗಿದೆ. ಅಭಿಮಾನಿಗಳು ಚಿತ್ರ ಮೆಚ್ಚಿ, ನಿರ್ಮಾಪಕ ಗೆದ್ದರೆ ಅದು ನಾಯಕನಿಗೆ ಹೆಮ್ಮೆ ತಾನೆ ಎಂದರು.

key wordsd : hatrick hero shivarajkumar saturday watched his new movie RUSTHUM at shanthala theater in mysore with his wife geetha.