ಲಾಂಗ್ ಹಿಡಿಯೋದು ಹೇಗೆ …!! ಹ್ಯಾಟ್ರಿಕ್ ಹೀರೋ ಶಿವಣ್ಣ ಪಾಠ

Promotion

ಬೆಂಗಳೂರು, ಆಗಸ್ಟ್ 27, 2021 (www.justkannada.in): ಹ್ಯಾಟ್ರಿಕ್ ಹೀರೋ ಶಿವಣ್ಣ ಲಾಂಗ್ ಹಿಡಿಯುವ ಸ್ಟೈಲ್ ಅನ್ನು ಯುವ ನಟರೊಬ್ಬರಿಗೆ ಹೇಳಿಕೊಡುತ್ತಿರುವ ಫೋಟೊ ಎಲ್ಲರ ಗಮನ ಸೆಳೆದಿದೆ!

ಕೆ.ಮಂಜು ಪುತ್ರ ಶ್ರೇಯಸ್ ಮಂಜುಗೆ ಶಿವಣ್ಣ ಲಾಂಗ್ ಹಿಡಿಯುವುದು ಹೇಗೆಂದು ತೋರಿಸಿಕೊಟ್ಟಿದ್ದಾರೆ. ಈ ಫೋಟೋ ಕಂಡು ಶಿವಣ್ಣ ಅಭಿಮಾನಿಗಳು ಫಿದಾ ಆಗಿದ್ದಾರೆ.

ಶ್ರೇಯಸ್ ಮಂಜು ನಾಯಕರಾಗಿರುವ ‘ರಾಣಾ’ ಚಿತ್ರದ ಶೂಟಿಂಗ್ ಸ್ಥಳದಲ್ಲಿ ಶಿವಣ್ಣ ಸಾಕಷ್ಟು ತರಬೇತಿ ನೀಡಿದ್ದಾರೆ.
ರೌಡಿಸಂ ಹಿನ್ನಲೆಯುಳ್ಳ ಕತೆಯಿರುವ ಈ ಚಿತ್ರತಂಡ ಇತ್ತೀಚೆಗೆ ಶಿವರಾಜ್ ಕುಮಾರ್ ಅವರನ್ನು ಭೇಟಿಯಾಗಿತ್ತು. ಈ ವೇಳೆ ಶ್ರೇಯಸ್ ಗೆ ಶಿವಣ್ಣ ಕೆಲವು ಟಿಪ್ಸ್ ಕೊಟ್ಟಿದ್ದಾರೆ.