ಹೆಚ್ ಡಿಕೆ ಗೆದ್ದೆತ್ತಿನ ಬಾಲ ಹಿಡಿಯೋರು: ಜೆಡಿಎಸ್ ಗೆ ವೋಟ್ ಹಾಕಿದ್ರೆ ಬಿಜೆಪಿಗೆ ಮತ ಕೊಟ್ಟಂಗೆ- ಮಾಜಿ ಸಿಎಂ ಸಿದ್ಧರಾಮಯ್ಯ.

Promotion

ಹಾಸನ,ಜನವರಿ,21,2023(www.justkannada.in):  ಚುನಾವಣೆ ಸಮೀಪಿಸುತ್ತಿದ್ದಂತೆ ರಾಜಕೀಯ ನಾಯಕರ ಆರೋಪ ಪ್ರತ್ಯಾರೋಪ, ವಾಕ್ಸಮರ, ಅಬ್ಬರದ ಪ್ರಚಾರ ಜೋರಾಗಿದ್ದು ಈ ಮಧ್ಯೆ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ವಿರುದ್ಧ ವಿಪಕ್ಷ ನಾಯಕ ಸಿದ್ಧರಾಮಯ್ಯ ಗುಡುಗಿದ್ದಾರೆ.

ಹಾಸನದಲ್ಲಿ ಮಾತನಾಡಿರುವ ಸಿದ್ಧರಾಮಯ್ಯ, ಹೆಚ್.ಡಿ ಕುಮಾರಸ್ವಾಮಿ ತಮಟೆ ಹೊಡ್ಕೊಂಡು ಓಡಾಡುತ್ತಿದ್ದಾರೆ.  ಜೆಡಿಎಸ್ ಐದಾರು ಜಿಲ್ಲೆ ಮಾತ್ರ ಇದೆ. ಹೆಚ್.ಡಿಕೆ ಅಧಿಕಾರದಲ್ಲಿದ್ದಾಗ ಪಂಚರತ್ನ ಮಾಡಲಿಲ್ಲ. ಈಗ ಜೆಡಿಎಸ್ ಗೆ ಅಧಿಕಾರ ಕೊಡಬೇಕಂತೆ ಇಲ್ಲದಿದ್ದರೆ ಪಕ್ಷ ವಿಸರ್ಜನೆ ಮಾಡ್ತಾರಂತೆ ಈಗಲೇ ಜೆಡಿಎಸ್ ಪಕ್ಷ ವಿಸರ್ಜನೆ ಮಾಡಿ. ಜನ ಏನು ಜೆಡಿಎಸ್ ಬೇಕು ಅಂತಿದ್ದಾರಾ..? ಎಂದು ಟಾಂಗ್ ನೀಡಿದರು.

ಹೆಚ್.ಡಿ ಕುಮಾರಸ್ವಾಮಿ ಗೆದ್ದೆತ್ತಿನ ಬಾಲ ಹಿಡಿಯೋರು. ಯಾವತ್ತೂ  ಅವರು ಸ್ವತಂತ್ರವಾಗಿ ಅಧಿಕಾರಕ್ಕೆ  ಬರಲ್ಲ  ಜೆಡಿಎಸ್ ಗೆ ವೋಟ್ ಕೊಟ್ಟರೇ ಬಿಜೆಪಿಗೆ ವೋಟ್ ಕೊಟ್ಟ ಹಾಗೆ ಎಂದು ಸಿದ್ಧರಾಮಯ್ಯ ಹೇಳಿದರು.

ಈ ಬಾರಿ ಕಾಂಗ್ರೆಸ್ ಅಧಿಕಾರಕ್ಕೆ ಬರಬೇಕು. ಹಾಸನದಲ್ಲಿ ಕನಿಷ್ಟ 5 ಸೀಟು ಗೆಲ್ಲಬೇಕು ಎಂದು ಸಿದ್ಧರಾಮಯ್ಯ ಹೇಳಿದರು.

Key words:  Hassan-  JDS-HD Kumaraswamy- Former CM- Siddaramaiah.