ಕೊಡಗು ಜಿಲ್ಲೆಯಲ್ಲಿ ಇಂದು ಮತ್ತು ನಾಳೆ ಕಠಿಣ  ಲಾಕ್ ಡೌನ್.

Promotion

 

ಕೊಡಗು,ಜೂನ್,5,2021(www.justkannada.in):  ರಾಜ್ಯದಲ್ಲಿ ಕೊರೋನಾ ಸೋಂಕು ವ್ಯಾಪಕವಾಗಿ ಹರಡಿದ್ದು, ಈ ಹಿನ್ನೆಲೆಯಲ್ಲಿ ಜೂನ್ 7ರವರೆಗೆ ಜಾರಿಯಲ್ಲಿರುವ ಲಾಕ್ ಡೌನ್ ಅನ್ನ ಈಗಾಗಲೇ ಜೂನ್ 14ರವರೆಗೆ  ವಿಸ್ತರಣೆ ಮಾಡಲಾಗಿದೆ.

ಈ ಮಧ್ಯೆ ಕೋವಿಡ್ ಹೆಚ್ಚಿರುವ ಜಿಲ್ಲೆಗಳಲ್ಲಿ ವಾರದಲ್ಲಿ ಕೆಲವು ದಿನಗಳ ಕಾಲ ಸಂಪೂರ್ಣ ಲಾಕ್ ಡೌನ್ ನಂತಹ ನಿರ್ಧಾರ ಕೈಗೊಳ್ಳಲಾಗಿದೆ. ಅಂತೆಯೇ ಕೊಡಗು ಜಿಲ್ಲೆಯಲ್ಲಿ ಇಂದು ಮತ್ತು ನಾಳೆ ಕಠಿಣ ಲಾಕ್ ಡೌನ್ ಜಾರಿ ಮಾಡಲಾಗಿದೆ.  ಇಂದು ಮತ್ತು ನಾಳೆ ಬೆಳಿಗ್ಗೆ 10ರವರೆಗೆ ಹಾಲು ಖರೀದಿಸಲು ಮಾತ್ರ ಅವಕಾಶವಿರಲಿದೆ. ಉಳಿದೆಲ್ಲವೂ ಬಂದ್ ಆಗಿದೆ.

ಇನ್ನು ಕಠಿಣ ಲಾಕ್ ಡೌನ್ ಜಾರಿ ಮಾಡಲು ಪೊಲೀಸರು ರಸ್ತೆಗಿಳಿದಿದ್ದು, ಅನಗತ್ಯವಾಗಿ ಓಡಾಡುತ್ತಿರುವವರಿಗೆ ಕೇಸ್ ಹಾಕುವುದಾಗಿ ಎಚ್ಚರಿಕೆ ನೀಡಿದ್ದಾರೆ.

Key words:  Hard -lockdown- today – tomorrow – Kodagu- district.