ಶ್ರೀದೇವಿ ಹುಟ್ಟು ಹಬ್ಬ ಹಿನ್ನಲೆ: ಹೃದಯಸ್ಪರ್ಶಿ ಪೋಸ್ಟ್ ಮಾಡಿದ ಮಗಳು ಜಾನ್ವಿ

Promotion

ಮುಂಬೈ:ಆ-13:(www.justkannada.in) ಇಂದು ಬಾಲಿವುಡ್ ಲೇಡಿ ಸೂಪರ್ ಸ್ಟಾರ್ ಎಂದೇ ಖ್ಯಾತಿ ಪಡೆದಿದ್ದ ನಟಿ, ದಿ.ಶ್ರೀದೇವಿ ಅವರ 56ನೇ ವರ್ಷದ ಹುಟ್ಟುಹಬ್ಬ. ನಟಿ ಶ್ರೀದೇವಿ ನಿಧನರಾಗಿ ಒಂದು ವರ್ಷಕ್ಕೂ ಅಧಿಕ ಸಮಯ ಕಳಿಯುತ್ತಿದೆ. ಆದರೂ ಅವರ ನೆನಪು ಮಾತ್ರ ಇನ್ನೂ ಅಜರಾಮರ. ಶ್ರೀದೇವಿ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಮಗಳು ಜಾಹ್ನವಿ ಕಪೂರ್, ಹೃದಯಸ್ಪರ್ಶಿ ಪೋಸ್ಟ್ ಒಂದನ್ನು ಮಾಡಿದ್ದಾರೆ.

ಶ್ರೀದೇವಿ ಅವರ ಫೋಟೋ ಒಂದನ್ನು ಹಂಚಿಕೊಂಡಿದ್ದು “ಹ್ಯಾಪಿ ಬರ್ತ್ ಡೇ ಮಮ್ಮಾ ಐ ಲವ್ ಯೂ” ಎಂದು ಪೋಸ್ಟ್ ಮಾಡಿದ್ದಾರೆ.

ಇದೇ ವೇಳೆ ಬೋನಿ ಕಪೂರ್ ಕೂಡ ಭಾವನಾತ್ಮಕವಾದ ಮೆಸೆಜ್ ಪೋಸ್ಟ್ ಮಾಡಿದ್ದು, ಹ್ಯಾಪಿ ಬರ್ತ್ ಡೇ ಜಾನ್, ಜೀವನದ ಪ್ರತಿ ನಿಮಿಷವೂ ನಿನ್ನನ್ನು ಮಿಸ್ ಮಾಡಿಕೊಳ್ಳುತ್ತಿದ್ದೇನೆ. ನೀನು ಶಾಶ್ವತವಾಗಿ ನಮ್ಮೊಂದಿಗೇ ಇದ್ದು, ನಮಗೆ ಮಾರ್ಗದರ್ಶನ ನೀಡು’ ಎಂದು ಬರೆದಿದ್ದಾರೆ.

ಅಭಿಮಾನಿಗಳು ಕೂಡ ಶ್ರೀದೇವಿಯನ್ನು ಸ್ಮರಿಸುತ್ತಾ, “ನಿಮ್ಮನ್ನು ಮಿಸ್ ಮಾಡಿಕೊಳ್ಲುತ್ತಿದ್ದೇ ಮೇಡಂ” ಎಂದಿದ್ದಾರೆ. ಕಳೆದ ವರ್ಷ ಫೆಬ್ರವರಿ 24ರಂದು ಶ್ರೀದೇವಿ ದುಬೈನ ಹೋಟೆಲ್ ಒಂದರ ಬಾತ್ ಟಬ್‍ಗೆ ಅಚಾನಕ್ ಆಗಿ ಬಿದ್ದು ಕೊನೆಯುಸಿರೆಳೆದಿದ್ದರು.

ಶ್ರೀದೇವಿ ಹುಟ್ಟು ಹಬ್ಬ ಹಿನ್ನಲೆ: ಹೃದಯಸ್ಪರ್ಶಿ ಪೋಸ್ಟ್ ಮಾಡಿದ ಮಗಳು ಜಾನ್ವಿ

Happy Birthday Sridevi: Janhvi Kapoor shares heartwarming post for her ‘Mumma’