ಮಳೆಗೆ ಹಂಪಿ ಐತಿಹಾಸಿಕ ಸಾಲು ಮಂಟಪ ಕುಸಿತ..

Promotion

ಹೊಸಪೇಟೆ,ಸೆಪ್ಟೆಂಬರ್,29,2020(www.justkannada.in) : ಮೂರು ದಿನಗಳಿಂದ ಸತತ ಸುರಿದ ಮಳೆಗೆ ಹಂಪಿಯ ವಿಜಯ ವಿಠ್ಠಲ ದೇಗುಲದ ಪಕ್ಕದ ಐತಿಹಾಸಿಕ ಸಾಲು ಮಂಟಪ ಕುಸಿದು ಬಿದ್ದಿದೆ.jk-logo-justkannada-logo

ಹಂಪಿಯಲ್ಲಿ ಕಳೆದ ಮೂರು ದಿನಗಳಿಂದ ತುಂತುರು ಮಳೆ ಸುರಿದಿತ್ತು. ಹೀಗಾಗಿ, ಮಂಟಪ ಕುಸಿದಿದೆ. ತಿಂಗಳಲ್ಲೇ ಮಳೆಗೆ ಹಂಪಿಯಲ್ಲಿ ಎರಡ್ಮೂರು ಮಂಟಪಗಳು ಬಿದ್ದಿವೆ. ಈ ಹಿಂದೆ ಹಂಪಿಯ ಶ್ರೀ ವಿರೂಪಾಕ್ಷೇಶ್ವರ ರಥ ಬೀದಿಯಲ್ಲಿ ಮಂಟಪದ ಚಾವಣಿ ಕುಸಿದು ಬಿದ್ದಿತ್ತು. ಈ ಮಂಟಪ ಜೀರ್ಣೋದ್ದಾರ ಮಾಡಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.Hampi-historic-line-collapsed-rainಬಸವಣ್ಣ ಮಂಟಪದ ಬಳಿಯ ಮಂಟಪವೊಂದು ಉರುಳಿ ಬಿದ್ದಿತ್ತು. ಹಂಪಿಯಲ್ಲಿ ಮಳೆಗೆ ಮಂಟಪಗಳು ಉರುಳಿ ಬೀಳುತ್ತಿದ್ದು, ಭಾರತೀಯ ಪುರಾತತ್ವ ಇಲಾಖೆ ಮಂಟಪಗಳ ಸಂರಕ್ಷಣೆಗೆ ಒತ್ತು ನೀಡಬೇಕು ಎಂದು ಸ್ಥಳಿಯರು ಆಗ್ರಹಿಸಿದ್ದಾರೆ.

ಉತ್ತರ ಕರ್ನಾಟಕದಲ್ಲಿ ಕಳೆದ ಹಲವು ದಿನಗಳಿಂದಲೂ ವರುಣ ಅಬ್ಬರಿಸುತ್ತಿದ್ದು ಭಾರಿ ಪ್ರಮಾಣದಲ್ಲಿ ಮಳೆಯಾಗುತ್ತಿದೆ. ಇಲ್ಲಿನ ಜನಜೀವನ ಅಸ್ತವ್ಯಸ್ತಗೊಂಡಿದೆ. ಜನರು ಮನೆಗಳನ್ನು ಬೆಳೆಗಳನ್ನು ಕಳೆದುಕೊಂಡು ತೀವ್ರ ಸಂಕಷ್ಟ ಎದುರಿಸುವಂತ್ತಾಗಿದೆ.

key words : Hampi-historic-line-collapsed-rain