ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಪರ ವಿಶ್ವನಾಥ್ ಬ್ಯಾಟಿಂಗ್

Promotion

ಮೈಸೂರು, ಜುಲೈ 04, 2021 (www.justkannada.in): ಡಿ.ಕೆ.ಶಿವಕುಮಾರ್ ಪರ ವಿಶ್ವನಾಥ್ ಬ್ಯಾಟಿಂಗ್ ಮಾಡಿದ್ದಾರೆ.

ಡಿ.ಕೆ.ಶಿ. ಸಂಘಟನಾ ಚತುರ. ಪಕ್ಷ ಸಂಘಟನೆಗೆ ಏನು ಮಾಡಬೇಕು ಅಂತ ಅವರಿಗೆ ಗೊತ್ತು. ಸದ್ಯದ ರಾಜಕೀಯ ಪರಿಸ್ಥಿತಿ, ಚಲನ ವಲನ ಗಮನಿಸಿ ಕಾಂಗ್ರೆಸ್ ಬಿಟ್ಟು ಹೋಗಿರುವವರನ್ನು ಮಾತೃ ಪಕ್ಷಕ್ಕೆ ಕರೆಯುತ್ತಿರುವುದು ಅವರ ಸೌಜನ್ಯತೆ. ಅವರ ಸಂಘಟನಾ ಚತುರತೆ, ಸೌಜನ್ಯತೆಯನ್ನು ಮೆಚ್ಚುತ್ತೇನೆ ಎಂದು ಸುದ್ದಿಗೋಷ್ಠಿಯಲ್ಲಿ ವಿಚ್ವಿ ಹೇಳಿದರು.

ಪಕ್ಷ ಸಂಘಟನೆ ಮಾಡುವವರ ರೀತಿ ಅದು. ಅಂತಹ ಸೌಜನ್ಯ ಸಿದ್ದರಾಮಯ್ಯ ಅವರಿಗೂ ಇರಬೇಕಿತ್ತು.  ಆದರೆ ಪ್ರಳಯ ಆದರೂ ಪಕ್ಷಕ್ಕೆ ಸೇರಿಸಲ್ಲ ಅಂತಾರೆ. ಪಕ್ಷ ಬಿಟ್ಟುವವರು ಬರಬಾರದು ಎಂದಾದರೆ ಸಿದ್ದರಾಮಯ್ಯ ಕಾಂಗ್ರೆಸ್ ಸೇರುವಾಗ ಎಲ್ಲ ಹಿರಿಯ ಕಾಂಗ್ರೆಸ್ ಮುಖಂಡರು ಹೀಗೆ ಹೇಳಿದ್ರಾ ? ಎಂದು ಪ್ರಶ್ನಿಸಿದರು.

ಸಿದ್ದರಾಮಯ್ಯ ದ್ವೇಷದ ರಾಜಕಾರಣ ಬಿಡಬೇಕು. ಪಕ್ಷ ಬಿಡುವುದು, ಸೇರುವುದು ಹೊಸತಲ್ಲ ಎಂದು ಮೈಸೂರಿನಲ್ಲಿ ಎಚ್. ವಿಶ್ವನಾಥ್ ಹೇಳಿದರು.