ಸಮ್ಮಿಶ್ರ ಸರಕಾರ ಪತನ : ಪಶ್ಚಾತ್ತಾಪ ಸತ್ಯಾಗ್ರಹಕ್ಕೆ ಮುಂದಾದ ಎಚ್.ವಿಶ್ವನಾಥ್.

Promotion

 

ಮೈಸೂರು, ಏ.02, 2023 : (www.justkannada.in news) ವಿಧಾನ ಪರಿಷತ್ ನ  ಬಿಜೆಪಿ ಸದಸ್ಯ ಎಚ್. ವಿಶ್ವನಾಥ್ (H.VISHWANATH) ಅವರು ಪಶ್ಚಾತ್ತಾಪ ಸತ್ಯಾಗ್ರಹಕ್ಕೆ ಮುಂದಾಗಿದ್ದಾರೆ.

ಇದೇ ಏಪ್ರಿಲ್ 3 ರಂದು ಬೆಳಗ್ಗೆ 11 ಕ್ಕೆ ಮೈಸೂರು ನ್ಯಾಯಾಲಯ ಮುಂಭಾಗದ ಮಹಾತ್ಮಾ ಗಾಂಧೀಜಿ ಪ್ರತಿಮೆ ಬಳಿ ವಿಶ್ವನಾಥ್ ಈ ಪಶ್ಚಾತ್ತಾಪ (REPENTANCE PROTEST) ಸತ್ಯಾಗ್ರಹ  ಹಮ್ಮಿಕೊಂಡಿದ್ದಾರೆ.

ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರಾಗಿದ್ದ ಅಡಗೂರು ಎಚ್.ವಿಶ್ವನಾಥ್, 2018 ರ ಚುನಾವಣೆ ಬಳಿಕ ಅಸ್ಥಿತ್ವದಲ್ಲಿದ್ದ ಕಾಂಗ್ರೆಸ್- ಜೆಡಿಎಸ್ ಸರಕಾರ ಪತನಗೊಂಡು, ನೂತನವಾಗಿ ಬಿಜೆಪಿ ಸರಕಾರ ಅಧಿಕಾರಕ್ಕೆ ಬರಲು ಕಾರಣಕರ್ತರು.

ಇದೀಗ ಬಿಜೆಪಿ ಸರಕಾರದ  ತೀರ್ಮಾನಗಳ ವಿರುದ್ಧ ಎಚ್.ವಿಶ್ವನಾಥ್ ತೀವ್ರ ಅಸಮಧಾನ ವ್ಯಕ್ತಪಡಿಸಿ, ಬಹಿರಂಗವಾಗಿಯೇ ಪಕ್ಷ ಹಾಗೂ ಪಕ್ಷದ ನಾಯಕರ ವಿರುದ್ಧ ಹೇಳಿಕೆ ನೀಡಲಾರಂಭಿಸಿದರು. ಇದರಿಂದ ಬಿಜೆಪಿ ತೀವ್ರ ಮುಜುಗರ ಅನುಭವಿಸುವಂತಾಗಿತ್ತು. ಇದೀಗ, ಖುದ್ದು ವಿಶ್ವನಾಥ್ ಅವರೇ ‘ಪಶ್ಚಾತ್ತಾಪ’ ಸತ್ಯಾಗ್ರಹಕ್ಕೆ ಮುಂದಾಗಿರುವುದು ತೀವ್ರ ಕುತೂಹಲ ಕೆರಳಿಸಿದೆ.

Key words : h.vishwanath-repentance-bjp-congress-mysore-protest