ಪ್ರಧಾನಿ ಮೋದಿಯವರ ಜನಪ್ರಿಯತೆಗೆ ಗುಜರಾತ್ ಫಲಿತಾಂಶ ಸಾಕ್ಷಿ-ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ.

Promotion

ಬೆಂಗಳೂರು,ಡಿಸೆಂಬರ್,8,2022(www.justkannada.in): ಗುಜರಾತ್ ವಿಧಾನಸಭಾ ಚುನಾವಣೆಯ ಫಲಿತಾಂಶ ಪ್ರಕಟವಾಗುತ್ತಿದ್ದು ಬಿಜೆಪಿ ದಾಖಲೆಯ ಗೆಲುವು ಸಾಧಿಸುತ್ತಿರುವ ಹಿನ್ನೆಲೆ ಬಿಜೆಪಿ ನಾಯಕರು ಸಂತಸ ಹಂಚಿಕೊಂಡಿದ್ದಾರೆ.

ಈ ಸಂಬಂಧ ಸುದ್ಧಿಗೋಷ್ಠಿ ನಡೆಸಿ ಮಾತನಾಡಿದ ಸಂತಸ ಹಂಚಿಕೊಂಡ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ. ಗುಜರಾತ್ ನಲ್ಲಿ 153 ಕ್ಷೇತ್ರಗಳನ್ನ ಗೆಲ್ಲುವ ನಿರೀಕ್ಷೆ ಇದೆ. ಗುಜರಾತ್ ಗೆಲುವಿನಿಂದ ರಾಜ್ಯದ ಬಿಜೆಪಿ ಕಾರ್ಯಕರ್ತರಿಗೆ ಹೊಸ ಹುಮ್ಮಸ್ಸು  ಬಂದಿದೆ. ಪ್ರಧಾನಿ ಮೋದಿಯವರ ಜನಪ್ರಿಯತೆಗೆ ಫಲಿತಾಂಶವೇ ಸಾಕ್ಷಿ. ಅಲ್ಲದೆ  ಗುಜರಾತ್ ಫಲಿತಾಂಶ ರಾಜ್ಯದ ಮೇಲೂ ಪರಿಣಾಮ ಬೀರಲಿದೆ ಎಂದು ನುಡಿದರು.

ಹಿಮಾಚಲ ಪ್ರದೇಶದಲ್ಲಿ 5 ವರ್ಷಕ್ಕೊಮ್ಮೆ ಸರ್ಕಾರ ಬದಲಾಗುತ್ತದೆ. ಹೀಗಾಗಿ ಈ ಬಾರಿ ಬಿಜೆಪಿ ಹಿನ್ನಡೆ ಅನುಭವಿಸಿದೆ ಎಂದು ಬಿಎಸ್ ವೈ ತಿಳಿಸಿದರು.

 ಗುಜರಾತ್ ನಲ್ಲಿ ಆಗಿರುವ ಅಭಿವೃದ್ದಿಗೆ ಜಯ ಸಿಕ್ಕಿದೆ-ಸಿ.ಟಿ ರವಿ.

ಗುಜರಾತ್ ಫಲಿತಾಂಶ ಕುರಿತು ಪ್ರತಿಕ್ರಿಯಿಸಿದ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ, ಗುಜರಾತ್ ನಲ್ಲಿ ಆಗಿರುವ ಅಭಿವೃದ್ದಿಗೆ ಜಯ ಸಿಕ್ಕಿದೆ.  ನಾನು ಪ್ರಚಾರಕ್ಕೆ  ಹೋಗಿದ್ದ ಕ್ಷೇತ್ರದಲ್ಲೂ ಒಳ್ಳೆಯ ಫಲಿತಾಂಶ ಬಂದಿದೆ.  ಗುಜರಾತ್ ನಲ್ಲಿ ಮೋದಿ ಜನರ ಮನಸ್ಸು ಗೆದ್ದಿದ್ದಾರೆ ಎಂದರು.

Key words: Gujarat-election-result –PM-Modi-Former CM- BS Yeddyurappa.

ENGLISH SUMMARY…

Gujarat assembly election results are proof of the popularity of PM Modi: Former CM B.S. Yediyurappa
Bengaluru, December 8, 2022 (www.justkannada.in): The BJP leaders of the State have expressed their joy at the Gujarat assembly election results.
Addressing a press meet today, former Chief Minister B.S. Yediyurappa said that the party expects to win 153 seats in Gujarat. “The enthusiasm of the BJP party workers has increased from the results of the Gujarat elections. It is proof for the popularity of Prime Minister Narendra Modi. The Gujarat election results will have a good impact on the elections in our state too,” he said.
BSY also expressed his view that the government in Himachal Pradesh will change once in 5 years and hence BJP has a setback this time.
Keywords: Former CM B.S. Yediyurappa/ Gujarat assembly election results