ಗ್ಯಾರಂಟಿ ಯೋಜನೆ ಜಾರಿ ಮಾಡದಿದ್ರೆ ಜನರೇ ರಿಯಾಕ್ಟ್ ಮಾಡ್ತಾರೆ- ಸಂಸದೆ ಸುಮಲತಾ ಅಂಬರೀಶ್.  

Promotion

  ಮಂಡ್ಯ,ಮೇ,29,2023(www.justkannada.in): ಕಾಂಗ್ರೆಸ್ ಸರ್ಕಾರ ಭರವಸೆ ನೀಡಿರುವ 5 ಗ್ಯಾರಂಟಿಗಳ ಜಾರಿಗೆ ವಿಳಂಬವಾದರೆ ಉಗ್ರ ಹೋರಾಟ, ಪ್ರತಿಭಟನೆ ನಡೆಸುವುದಾಗಿ  ಬಿಜೆಪಿ ಹೇಳಿದೆ. ಈ ಕುರಿತು ಮಾತನಾಡಿರುವ ಸಂಸದೆ ಸುಮಲತಾ ಅಂಬರೀಶ್, ಗ್ಯಾರಂಟಿ ಯೋಜನೆ ಜಾರಿ ಮಾಡದಿದ್ರೆ ಜನರೇ ರಿಯಾಕ್ಟ್ ಮಾಡ್ತಾರೆ ಎಂದಿದ್ದಾರೆ.

ಮಂಡ್ಯದ ದೊಡ್ಡರಸಿನಕೆರೆಯಲ್ಲಿ ಮಾತನಾಡಿದ ಸಂಸದೆ ಸುಮಲತಾ ಅಂಬರೀಶ್,  ಗ್ಯಾರಂಟಿ ಯೋಜನೆ ಜಾರಿಗೆ ಸರ್ಕಾರ ಸ್ವಲ್ಪ ಸಮಯ ಕೇಳಿದೆ, ಅವರಿಗೆ ಸಮಯ ನೀಡಬೇಕು, ಅವರು ಗ್ಯಾರಂಟಿ ಕಾರ್ಡ್ ನೀಡದಿದ್ದರೆ ತಾವಲ್ಲ, ಜನರೇ ಪ್ರತಿಕ್ರಿಯಿಸುತ್ತಾರೆ ಎಂದರು.

ಕಾಂಗ್ರೆಸ್ ಬೆಂಬಲಿತ ರೈತ ಸಂಘದ ಅಭ್ಯರ್ಥಿ ದರ್ಶನ್ ಪುಟ್ಟಣ್ಣಯ್ಯ ಗೆಲುವಿಗೆ ಪರೋಕ್ಷವಾಗಿ ಸಂಸದೆ ಸುಮಲತಾ  ಕಾರಣ ಎಂಬ ಬಿಜೆಪಿ ಪರಾಜಿತ ಅಭ್ಯರ್ಥಿಯ ಆರೋಪ ಕುರಿತು ಪ್ರತಿಕ್ರಿಯಿಸಿದ ಸುಮಲತಾ ಅಂಬರೀಶ್,  ಅವರ ಹೇಳಿಕೆ ಬಗ್ಗೆ ನಾನು ಮಾತಾಡಲು ಇಷ್ಟಪಡುವುದಿಲ್ಲ. ಮ್ಯಾಚ್ ಫಿಕ್ಸಿಂಗ್ ಎನ್ನುವ ಅಗತ್ಯ ನನಗೆ ಇಲ್ಲ ಎಂದು ಹೇಳಿದರು.

Key words: guarantee -scheme – not implemented- people – react – MP Sumalatha Ambarish.