ಗ್ಯಾರಂಟಿ ಯೋಜನೆ :  ಇಂದು ಹಣಕಾಸು ಇಲಾಖೆ ಜೊತೆ ಸಿಎಂ ಸಿದ್ಧರಾಮಯ್ಯ ಸಭೆ.

Promotion

ಬೆಂಗಳೂರು,ಮೇ,30,2023(www.justkannada.in): ಚುನಾವಣೆಗೂ ಮುನ್ನ  ನೀಡಿದ್ದ 5 ಗ್ಯಾರಂಟಿ ಯೋಜನೆ ಭರವಸೆಯನ್ನ ಜಾರಿಗೊಳಿಸಲು ಸಿಎಂ ಸಿದ್ಧರಾಮಯ್ಯ ನೇತೃತ್ವದ ಸರ್ಕಾರ ಮುಂದಾಗಿದ್ದು ಅದಕ್ಕಾಗಿ ರೂಪುರೇಷೆ ಹಾಕುತ್ತಿದೆ.

ನಿನ್ನೆಯಷ್ಟೆ ಆಹಾರ ಇಲಾಖೆ , ಇಂಧನ ಇಲಾಖೆ ಸೇರಿ ಐದು ಇಲಾಖೆಗಳ ಜೊತೆ ನಿನ್ನೆ ಸಭೆ ನಡೆಸಿ ಚರ್ಚಿಸಿದ್ದ ಸಿಎಂ ಸಿದ‍್ಧರಾಮಯ್ಯ ಇಂದು ಹಣಕಾಸು ಇಲಾಖೆ ಜೊತೆ ಮೀಟಿಂಗ್ ನಡೆಸಿ ಗೃಹ ಲಕ್ಷ್ಮಿ ಯೋಜನೆ, ನಿರುದ್ಯೋಗ ಭತ್ಯೆ, ಸಂಪನ್ಮೂಲ ಕ್ರೂಢೀಕರಣ ಯೋಜನೆ ಅನುಷ್ಟಾನದ ಬಗ್ಗೆ ಚರ್ಚೆ ನಡೆಸಲಿದ್ದಾರೆ ಎನ್ನಲಾಗಿದೆ.   

ಇಂದಿನ ಸಭೆಯಲ್ಲಿ ಅಂತಿಮ ರೂಪುರೇಷೆ ಸಿದ್ದಪಡಿಸಿ ನಾಳೆ ಎಲ್ಲಾ ಸಚಿವರ ಜೊತೆ ಸಿಎಂ ಸಿದ್ಧರಾಮಯ್ಯ ಸಭೆ ನಡೆಸಲಿದ್ದು ಬಳಿಕ ಗುರವಾರ ಸಚಿವ ಸಂಪುಟ ಸಭೆಯಲ್ಲಿ ಐದು ಗ್ಯಾರಂಟಿ ಯೋಜನೆಗಳ ಬಗ್ಗೆ ಅಂತಿಮ ತೀರ್ಮಾನ ತೆಗೆದುಕೊಳ್ಳುವ ಸಾಧ್ಯತೆ ಇದೆ.

Key words: Guarantee-scheme-CM -Siddaramaiah -meeting – finance department