ಜಿ.ಟಿ. ದೇವಗೌಡರು ಬಿಜೆಪಿಗೆ ಬಂದ್ರೆ ಸ್ವಾಗತ: ನಾನು ಕ್ಷೇತ್ರ ತ್ಯಾಗಕ್ಕೂ ಸಿದ್ಧ ಎಂದ ಶಾಸಕ ಎಲ್.ನಾಗೇಂದ್ರ.

Promotion

ಮೈಸೂರು,ಮೇ,14,2022(www.justkannada.in): ಬಿಜೆಪಿಗೆ ಘಟಾನುಘಟಿ ನಾಯಕರು ಸೇರ್ಪಡೆಯಾಗುತ್ತಾರೆ ಎಂಬ ಸಚಿವ ಎಸ್.‌ಟಿ ಸೋಮಶೇಖರ್ ಹೇಳಿಕೆಗೆ  ಪುಷ್ಟಿ ನೀಡುವಂತೆ ಶಾಸಕ ಎಲ್.ನಾಗೇಂದ್ರ ಪ್ರತಿಕ್ರಿಯೊಂದನ್ನ ನೀಡಿದ್ದು, ಭಾರಿ ಕುತೂಹಲಕ್ಕೆ ಕಾರಣವಾಗಿದೆ.

ಶಾಸಕ ಜಿ.ಟಿ. ದೇವಗೌಡರು ಬಿಜೆಪಿ ಪಕ್ಷಕ್ಕೆ ಬಂದ್ರೆ ಸ್ವಾಗತ. ಅವರ ಪುತ್ರ ಹರೀಶ್ ಗೌಡನಿಗೆ ಚಾಮರಾಜ ಟಿಕೆಟ್ ನೀಡಬೇಕು ಅಂತಾ ಹೈಕಮಾಂಡ್ ನಿರ್ಧಾರ ಮಾಡಿದರೇ ನಾನು ಕ್ಷೇತ್ರ ತ್ಯಾಗಕ್ಕೂ ಸಿದ್ಧನಿದ್ದೇನೆ ಎಂದು ಶಾಸಕ ಎಲ್.ನಾಗೇಂದ್ರ ತಿಳಿಸಿದ್ದಾರೆ.

ಮೈಸೂರಿನಲ್ಲಿ ಈ ಕುರಿತು ಮಾತನಾಡಿದ  ಶಾಸಕ ಎಲ್. ನಾಗೇಂದ್ರ, ಜಿ.ಟಿ ದೇವೇಗೌಡರು ಪಕ್ಷಕ್ಕೆ ಬಂದು ಈ ಭಾಗದಲ್ಲಿ ಬಿಜೆಪಿಗೆ ಎಂಟತ್ತು  ಸ್ಥಾನ  ಗೆಲ್ಲಿಸುತ್ತಾರೆ ಅನ್ನೋದಾದ್ರೆ ನಾನು ಕ್ಷೇತ್ರ ತ್ಯಾಗಕ್ಕೂ ಸಿದ್ಧ. ನನಗೆ ಪಕ್ಷ ಎಲ್ಲವನ್ನೂ ನೀಡಿದೆ. ಇಂತಹ ಪಕ್ಷಕ್ಕಾಗಿ ಕ್ಷೇತ್ರ ತ್ಯಾಗಕ್ಕೂ ನಾನು ಸಿದ್ಧನಾಗುತ್ತೇನೆ. ನಿಜಕ್ಕೂ ಘಟಾನುಘಟಿ ನಾಯಕರು ಬಿಜೆಪಿಗೆ ಬರ್ತಾರೆ. ಅವರು ಯಾರು ಅಂತಾ ಉಸ್ತುವಾರಿ ಸಚಿವರನ್ನೇ ಕೇಳಿ ಎಂದು ನುಡಿದರು.

Key words: GT Deve Gowda – BJP- Welcome –MLA-L.Nagendra