GST COUNCIL MEETING : ಸಿಎಂ ಬೊಮ್ಮಾಯಿ ನೇತೃತ್ವದಲ್ಲಿ ಮಂಡಿಸಿದ ಮಧ್ಯಂತರ ವರದಿ ಯಥಾವತ್ ಅಂಗೀಕಾರ.

cm-gst-council-meeting

kannada t-shirts

 

ಚಂಡಿಗಢ, ಜೂ.28, 2022 : (www.justkannada.in news)ಇಂದು ನಡೆದ ಜಿ.ಎಸ್.ಟಿ. ಕೌನ್ಸಿಲ್ ಸಭೆಯಲ್ಲಿ ಸಚಿವರ ಸಮಿತಿ ತೆರಿಗೆ ದರಗಳಲ್ಲಿನ ಪರಾಮರ್ಶೆಗೆ ಸಂಬಂಧಿಸಿದಂತೆ ಮಂಡಿಸಿದ ಮಧ್ಯಂತರ ವರದಿಯನ್ನು ಯಥಾವತ್ತಾಗಿ ಅಂಗೀಕರಿಸಲಾಯಿತು.

ಲಖನೌದಲ್ಲಿ ನಡೆದ ನಲವತ್ತೈದನೆಯ ಜಿ.ಎಸ್.ಟಿ. ಕೌನ್ಸಿಲ್ ಸಭೆಯಲ್ಲಿ, ಜಿ.ಎಸ್.ಟಿ. ದರಗಳಲ್ಲಿ ಪರಾಮರ್ಶೆ, ಕೆಳಮುಖ ತೆರಿಗೆ ರಚನೆಗಳಲ್ಲಿ ತಿದ್ದುಪಡಿ ಹಾಗೂ ತೆರಿಗೆ ವಿನಾಯಿತಿ ಕಡಿಮೆ ಮಾಡುವ ಪ್ರಕ್ರಿಯೆಗಳನ್ನು ಪರಿಶೀಲಿಸಲು ಸಚಿವರ ಸಮಿತಿ ರಚಿಸಲು ತೀರ್ಮಾನಿಸಲಾಗಿತ್ತು.

ಸದರಿ ಸಮಿತಿಗೆ ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅದ್ಯಕ್ಷರಾಗಿದ್ದು, ಪಶ್ಚಿಮ ಬಂಗಾಳ, ಬಿಹಾರ, ಕೇರಳ, ರಾಜಸ್ಥಾನ, ಉತ್ತರ ಪ್ರದೇಶ ಮತ್ತು ಗೋವಾ ರಾಜ್ಯಗಳ ಹಣಕಾಸು ಮಂತ್ರಿಗಳನ್ನು ಸದಸ್ಯರನ್ನಾಗಿ ನೇಮಿಸಲಾಗಿತ್ತು.

ಇಂದು ಚಂಡಿಗಡದಲ್ಲಿ ನಡೆದ ಜಿಎಸ್ಟಿ ಕೌನ್ಸಿಲ್ ನ ಸಭೆಯಲ್ಲಿ ಸಚಿವರ ಸಮಿತಿಯು ತೆರಿಗೆ ದರಗಳಲ್ಲಿನ ಪರಾಮರ್ಶೆಗೆ ಸಂಬಂಧಿಸಿದಂತೆ ಮಧ್ಯಂತರ ವರದಿಯನ್ನು ಸಲ್ಲಿಸಿತು. ಕೆಳಮುಖ ತೆರಿಗೆ ರಚನೆಯಲ್ಲಿ ತಿದ್ದುಪಡಿ ಮತ್ತು ತೆರಿಗೆ ವಿನಾಯಿತಿಗಳನ್ನು ಕಡಿಮೆ ಮಾಡುವಂತಹ ಎರಡು ಒತ್ತಾಯದ ಶಿಫಾರಸ್ಸುಗಳನ್ನು ಒಳಗೊಂಡ ಮಧ್ಯಂತರ ವರದಿಯನ್ನು ಕರ್ನಾಟಕದ ಮುಖ್ಯಮಂತ್ರಿ ಬೊಮ್ಮಾಯಿ, ಜಿ.ಎಸ್.ಟಿ. ಕೌನ್ಸಿಲ್ ಮುಂದೆ ಮಂಡಿಸಿದರು.

ಸಚಿವರ ಸಮಿತಿಯು ತನ್ನ ವರದಿಯಲ್ಲಿ ಮಂಡಿಸಿರುವ ವಿವರವಾದ ವಿಶ್ಲೇಷಣೆಯ ಕುರಿತು, ಕೌನ್ಸಿಲ್ ನ ಸದಸ್ಯರು ಪ್ರಶಂಸೆ ವ್ಯಕ್ತಪಡಿಸಿದರು.

ಸಮಿತಿಯ ಸಂಚಾಲಕರ ಪರಿಶ್ರಮವನ್ನು ಶ್ಲಾಘಿಸುತ್ತಾ ಅದರಲ್ಲಿನ ಅಂಶವಾರು ವಿವರಗಳನ್ನು ಚರ್ಚಿಸದೆ, ವರದಿಯನ್ನು ಯಥಾವತ್ತಾಗಿ ಅಳವಡಿಸಿಕೊಳ್ಳಬೇಕೆಂದು ದೆಹಲಿಯ ಸದಸ್ಯ ಮನೀಷ ಸಿಸೋಡಿಯಾ ಶಿಫಾರಸ್ಸು ಮಾಡಿದರು. ಸಮತೋಲನದ ದೃಷ್ಟಿಕೋನವನ್ನು ಪ್ರದರ್ಶಿಸುತ್ತ, ಗ್ರಾಹಕರ ಸೂಕ್ಷ್ಮತೆಗಳಿಗೆ ಸಂವೇದಿಸುವ ವರದಿಯನ್ನು ಕರ್ನಾಟಕದ ಮುಖ್ಯಮಂತ್ರಿಗಳ ನೇತೃತ್ವದ ಸಚಿವರ ಸಮಿತಿಯು ಹೊರತಂದಿರುತ್ತದೆ ಎಂದು ಉತ್ತರ ಪ್ರದೇಶ ಮತ್ತು ಬಿಹಾರ ರಾಜ್ಯಗಳ ಸದಸ್ಯರು ತಿಳಿಸಿದರು.

ಒಂದು ತೀರಾ ಅಪರೂಪದ ನಡೆಯಲ್ಲಿ, ಪ್ರತ್ಯೇಕ ಅಂಶಗಳನ್ನು ಚರ್ಚಿಸದೆ, ಸಚಿವರ ಸಮಿತಿಯು ವರದಿಯನ್ನು ಸಂಪೂರ್ಣವಾಗಿ ಜಿ.ಎಸ್.ಟಿ. ಕೌನ್ಸಿಲ್ ಸರ್ವಾನುಮತದಿಂದ ಅಂಗೀಕರಿಸಿತು. ವರದಿಯ ಸಿದ್ಧಪಡಿಸುವಿಕೆಯಲ್ಲಿ ಮುಖ್ಯವಾದ ಮತ್ತು ಪ್ರಸ್ತುತವಾದ ಅಂಶಗಳನ್ನು ಒದಗಿಸಿದ್ದಕ್ಕಾಗಿ ಎಲ್ಲ ರಾಜ್ಯಗಳ ಸದಸ್ಯರುಗಳಿಗೆ, ಕರ್ನಾಟಕದ ಮುಖ್ಯಮಂತ್ರಿಗಳು ಕೃತಜ್ಞತೆಯನ್ನು ಸಲ್ಲಿಸಿದರು.

key words : cm-gst-council-meeting

ENGLISH SUMMARY : 

GST Council in its 45th meeting held at Lucknow on 17.09.2021 decided to form a Group of Ministers (GoM) for looking into rate restructuring including correction of inverted duty structure and pruning exemptions. The GoM is headed by Sh Basavraj Bommai Hon’ble Cheif Minister of Karnataka and the finance ministers of States of West Bengal, Bihar, Kerala, Rajasthan, Uttar Pradesh and Goa are the Members of the GoM. The GoM on Rate Rationalisation submitted its interim report at the GST council meeting in Chandigarh today. The interim report is on two mandates of correcting inversion and pruning exemption list and was presented before GST council by Hon CM of Karnataka. The members of council expressed their appreciation for the detailed analysis done by GoM in the report.

Member of Delhi  Manish Sisodia while appreciating efforts of the convenor of GoM recommended that council should adopt the entire interim report as it is without any discussion on point wise items. The Members of Bihar and UP informed that very balanced view has been taken by GoM under leadership of CM of Karnataka in bringing out a report with due sensitivity to consumers. In one of very rare moves, the entire GoM report was accepted unanimously by council without discussion on individual points. Chief minister of Karnataka thanked all the member states of GoM for giving very relevant inputs in preparation of interim report.

website developers in mysore