ತಾಯಿ ಚಾಮುಂಡೇಶ್ವರಿಗೂ ಗೃಹಲಕ್ಷ್ಮಿ ಯೋಜನೆಯ ಹಣ : ದಿನೇಶ್ ಗೂಳಿಗೌಡರ ಪತ್ರಕ್ಕೆ ಡಿಸಿಎಂ ಡಿ.ಕೆ ಶಿವಕುಮಾರ್ ಸ್ಪಂದನೆ.  

Promotion

ಮೈಸೂರು,ನವೆಂಬರ್,17,2023(www.justkannada.in): ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆ ಗೃಹಲಕ್ಷ್ಮಿ ಯೋಜನೆ ಹಣವನ್ನು ಪ್ರತಿ ತಿಂಗಳು  ಹಣ ನಾಡದೇವತೆ ಚಾಮುಂಡೇಶ್ವರಿಗೂ ನೀಡಿ ಎಂದು ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ ಶಿವಕುಮಾರ್ ಗೆ ವಿಧಾನಪರಿಷತ್ ಸದಸ್ಯ ದಿನೇಶ್ ಗೂಳಿಗೌಡರು ಪತ್ರ ಬರೆದು ಮನವಿ ಮಾಡಿದ್ದಾರೆ.

ಈ ಕುರಿತು ಪತ್ರ ಬರೆದಿರುವ ಎಂಎಲ್ ಸಿ ದಿನೇಶ್ ಗೂಳಿಗೌಡರು, ಗೃಹಲಕ್ಷ್ಮಿ ಯೋಜನೆಗೂ ಮುನ್ನ ನಾಡದೇವತೆ ತಾಯಿ ಚಾಮುಂಡೇಶ್ವರಿಗೆ ಹರಕೆ ಹೊರಲಾಗಿತ್ತು. ನಂತರ ಗೃಹಲಕ್ಷ್ಮಿ ಯೋಜನೆ ಜಾರಿಗೊಳಿಸಲಾಯಿತು. ಯೋಜನೆಯ ಮೊದಲ ಹಣ ತಾಯಿ ಚಾಮುಂಡೇಶ್ವರಿಗೆ ಅರ್ಪಿಸಲಾಗಿತ್ತು. ಖುದ್ದು ಸಿಎಂ ಸಿದ್ದರಾಮಯ್ಯ ಡಿಸಿಎಂ ಡಿ ಕೆ ಶಿವಕುಮಾರ್ ತಾಯಿ ಚಾಮುಂಡೇಶ್ವರಿಗೆ 2 ಸಾವಿರ ರೂಪಾಯಿ ಅರ್ಪಿಸಿದ್ದರು.ಇದನ್ನು ಪ್ರತಿ ತಿಂಗಳು ನೀಡಿ ಎಂದು ಮನವಿ ಮಾಡಿದ್ದಾರೆ.

ದಿನೇಶ್ ಗೂಳಿಗೌಡ ಪತ್ರಕ್ಕೆ ಸ್ಪಂದಿಸಿರುವ ಡಿಸಿಎಂ  ಡಿ.ಕೆ ಶಿವಕುಮಾರ್, ಪ್ರತಿ ತಿಂಗಳು ನಾಡದೇವತೆ ತಾಯಿ ಚಾಮುಂಡೇಶ್ವರಿ ದೇಗುಲಕ್ಕೆ 2 ಸಾವಿರ ಅರ್ಪಿಸಲು ಒಪ್ಪಿದ್ದಾರೆ. ಈ ಬಗ್ಗೆ ಕ್ರಮ ವಹಿಸುವಂತೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ ಗೆ ಸೂಚನೆ ನೀಡಿದ್ದಾರೆ.  ದಿನೇಶ್ ಗೂಳಿಗೌಡ ಪತ್ರದ ಮೇಲೆ ಕ್ರಮ ವಹಿಸುವಂತೆ ಬರೆದು  ಡಿ.ಕೆ ಶಿವಕುಮಾರ್ ಸಹಿ ಹಾಕಿದ್ದಾರೆ.

Key words: Grilahakshmi Yojana -money – Chamundeshwari-DCM -DK Shivakumar-Dinesh Gooligowda