ಮಕ್ಕಳಿಗೆ ಕೊರೋನಾ ಲಸಿಕೆ ನೀಡಲು ಗ್ರೀನ್ ಸಿಗ್ನಲ್.

Promotion

ನವದೆಹಲಿ,ಅಕ್ಟೋಬರ್,12,2021(www.justkannada.in): ದೇಶದಲ್ಲಿ ಮಕ್ಕಳಿಗೂ ಕೊರೋನಾ ಲಸಿಕೆ ನೀಡಲು ಡಿಸಿಜಿಐ ಅನುಮತಿ ನೀಡಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಮಕ್ಕಳಿಗೆ ಕೋವಿಡ್  ಲಸಿಕೆ ನೀಡಲು ಅನುಮತಿ ಇಲ್ಲದ ಹಿನ್ನೆಲೆ ಸಾಕಷ್ಟು ಆತಂಕವಿತ್ತು. ಇದೀಗ 2 ರಿಂದ 18 ವರ್ಷದ ಮಕ್ಕಳಿಗೂ ಕೊವ್ಯಾಕ್ಸಿನ್ ಲಸಿಕೆ  ನೀಡಲು ಡಿಸಿಜಿಐ  ಗ್ರೀನ್ ಸಿಗ್ನಲ್ ನೀಡಿದೆ.

ಈ ಕುರಿತು ವಿಷಯ ತಜ್ಞರ ಸಮಿತಿಯ ಸಭೆಯಲ್ಲಿ ಇಂದು ಮಹತ್ವದ ನಿರ್ಧಾರವನ್ನು ಕೈಗೊಂಡಿದೆ. 2 ರಿಂದ 18 ವರ್ಷದ ಮಕ್ಕಳಿಗೆ ತುರ್ತು ಸಂದರ್ಭದಲ್ಲಿ ಕೊವ್ಯಾಕ್ಸಿನ್ ಲಸಿಕೆ ಬಳಸಲು ಡಿಸಿಜಿಐ ಅನುಮತಿ ನೀಡಿದೆ. ಹಾಗೆಯೇ  20 ದಿನಗಳ ಅಂತರದಲ್ಲಿ 2 ಡೋಸ್ ಲಸಿಕೆ ನೀಡಬೇಕು ಎಂದು ತಿಳಿಸಿದೆ.

Key words: Green signal – give- corona vaccine – children.